ಬೆಂಗಳೂರು : ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ನಗರದ ಆಸ್ಪತ್ರೆಗಳಲ್ಲಿ ಆಹಾರ ವಿತರಣೆ
ಬೆಂಗಳೂರು(ಉಡುಪಿ ಟೈಮ್ಸ್ ವರದಿ): ಪ್ರಧಾನ ಮಂತ್ರಿಗಳ ಸಾರ್ವಜನಿಕ ಕಲ್ಯಾಣ ಯೋಜನೆ ಪ್ರಚಾರ ಅಭಿಯಾನ ಕರ್ನಾಟಕದ ಪರವಾಗಿ, ಪ್ರಧಾನಿ ನರೇಂದ್ರ ಮೋದಿಯವರ ೭೦ ನೇ ಹುಟ್ಟು ಹಬ್ಬವನ್ನು ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಧ್ಯಾಹ್ನ ರೋಗಿಗಳಿಗೆ ಊಟವನ್ನು ವಿತರಿಸುವುದರ ಮೂಲಕ ಆಚರಿಸಲಾಯಿತು.
ದಕ್ಷಿಣ ಭಾರತದ ಉಪಾಧ್ಯಕ್ಷರಾದ ಬಿ.ಎಫ್ .ಪಾಟೀಲ್, ಗ್ರಾಮೀಣ ಯೋಜನಾ ವ್ಯವಸ್ಥಾಪಕರಾದ ಬಿ.ಎಫ್ ಪಾಟೀಲ್ ಜಿ, ಶ್ರೀನಿವಾಸ್ ಡಿ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಹಾರ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಜೈನ್ ಅವರು ರಾಜ್ಯದಾದ್ಯಂತ ಅಭಿಯಾನ ನಡೆಸುತ್ತಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಅಧ್ಯಕ್ಷೆ ಅಮಿತಾ ರಾಣಿ ಪಾಂಡೆ ಅವರು ಪ್ರಸ್ತುತ ಸದಸ್ಯರಿಗೆ ಪ್ರಧಾನಿ ಯೋಜನೆಗಳ ಉದ್ದೇಶಗಳು ಮತ್ತು ರಾಜ್ಯದ ಜನರ ಬಗ್ಗೆ ತಿಳಿಸಿದರು. ಪ್ರಧಾನಮಂತ್ರಿಯವರ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಶಿ ದೇಶಪಾಂಡೆ ಸ್ವಾಗತಿಸಿ ಲಲಿತ್ ಡಕಾಲಿ ಧನ್ಯವಾದವಿತ್ತರು.
ನಂತರ ನಡೆದ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಸದಾಶಿವಯ್ಯ ಮತ್ತು ಭಾರತೀಯ ಜನತಾ ಪಕ್ಷದ ಬೆಂಗಳೂರು ದಕ್ಷಿಣದ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂದೀಪ್ ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಹಾರ್ದಿಕ್ ಪಟೇಲ್ ಉಪಸ್ಥಿತರಿದ್ದರು