ಕಾಂಗ್ರೆಸ್ ವಿರುದ್ಧ ಜಾಹೀರಾತು: ಬಿಜೆಪಿಗೆ ಚು. ಆಯೋಗ ನೊಟೀಸ್

ನವದೆಹಲಿ: ವಿಶ್ವದ ಅತೀ ಭ್ರಷ್ಟ ಪಕ್ಷ ಕಾಂಗ್ರೆಸ್‌‘ ಎಂದು ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದಕ್ಕೆ ಚುನಾವಣಾ ಆಯೋಗವು ಬಿಜೆಪಿಗೆ ನೋಟಿಸ್‌ ಜಾರಿಗೆ ಮಾಡಿದೆ.

ಪತ್ರಿಕೆಗೆ ನೀಡಿರುವ ಜಾಹೀರಾತಿಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆಯೊಳಗೆ “ಪರಿಶೀಲಿಸಬಹುದಾದ ಮತ್ತು ಪತ್ತೆ ಹಚ್ಚಬಹುದಾದ” ಸಾಕ್ಷ್ಯಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು  ಕರ್ನಾಟಕ ಬಿಜೆಪಿಗೆ ಸೂಚಿಸಿದೆ. ಈ ಹಿಂದೆ, ಬಿಜೆಪಿಯ ದೂರಿನ ಮೇರೆಗೆ, ಚುನಾವಣಾ ಸಮಿತಿಯು ತನ್ನ ‘ಭ್ರಷ್ಟಾಚಾರ ದರ ಕಾರ್ಡ್’ ಜಾಹೀರಾತಿನ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೂ ಸಹ ಇದೇ ರೀತಿಯ ಸೂಚನೆಯನ್ನು ನೀಡಿತ್ತು. ಕಾಂಗ್ರೆಸ್ ಚುನಾವಣಾ ಸಮಿತಿಯನ್ನು ಸಂಪರ್ಕಿಸಿದ ನಂತರ ಚುನಾವಣಾ ಆಯೋಗ ಕರ್ನಾಟಕ ಬಿಜೆಪಿಗೆ ಅದರ ಜಾಹೀರಾತಿನ ಕುರಿತು ನೋಟಿಸ್ ನೀಡಿದೆ.

ಎದುರಾಳಿ ಪಕ್ಷಗಳ ನೀತಿ ಮತ್ತು ಆಡಳಿತ ಸರ್ಕಾರದ ವಿರುದ್ಧ ಟೀಕೆಯು ರಾಜಕೀಯ ಪಕ್ಷಗಳ ಸಂವಿಧಾನ ದತ್ತವಾದ ಹಕ್ಕು ಮಾತ್ರವಲ್ಲದೇ, ಭಾರತದ ಚುನಾವಣಾ ಪ್ರಕ್ರಿಯೆಯ ಅಡಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಕೆಲಸವಾಗಿದೆ ಎಂದು ಹೇಳಿರುವ ಚುನಾವಣಾ ಆಯೋಗವು, ಈ ಹಕ್ಕನ್ನು ಚಲಾಯಿಸುವಾಗ ರಾಜಕೀಯ ಪಕ್ಷಗಳು ಸಾರ್ವಜನಿಕ ಸಂವಾದದ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಬೇಕು ಎಂದಿದೆ. ಅಲ್ಲದೆ ಮಾದರಿ ನೀತಿ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಸಂಬಂಧಿತ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸೂಚಿಸಿದೆ.

ಅಲ್ಲದೇ ಈ ಸಂಬಂಧ ಸಾಕ್ಷ್ಯಗಳನ್ನು ಮೇ 9ರ ರಾತ್ರಿ 8 ಗಂಟೆಯ ಒಳಗೆ ನೀಡಬೇಕು. ಜತೆಗೆ ಅದನ್ನು ಸಾರ್ವಜನಿಕ ಗೊಳಿಸಬೇಕು ಎಂದು ಹೇಳಿದೆ. ಒಂದು ವೇಳೆ ಸಾಕ್ಷ್ಯ ನೀಡಲು ವಿಫಲವಾಗಿದ್ದೇ ಆದಲ್ಲಿ, ಬಿಜೆಪಿ ವಿರುದ್ಧ ಮಾದರಿ ನೀತಿ ಸಂಹಿತೆ ಹಾಗೂ ಭಾರತೀಯ ದಂಡ ಸಂಹಿತೆಯಡಿ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೋಟಿಸ್‌ ನಲ್ಲಿ ಆಯೋಗವು ಪ್ರಶ್ನೆ ಮಾಡಿದೆ.

ಆಯೋಗವು ತನ್ನ ನೋಟೀಸ್‌ನಲ್ಲಿ ವಿರೋಧ ಪಕ್ಷಗಳ ನೀತಿ ಮತ್ತು ಆಡಳಿತವನ್ನು ಟೀಕಿಸುವುದು ಸಂವಿಧಾನದಲ್ಲಿ ಖಾತ್ರಿಪಡಿಸಲಾದ ಹಕ್ಕು ಮತ್ತು ಭಾರತದ ಚುನಾವಣಾ ಪ್ರಕ್ರಿಯೆಯ ಅಡಿಯಲ್ಲಿ ವಿವಿಧ ರಾಜಕೀಯ ನಾಯಕರ ಅಗತ್ಯ ಕಾರ್ಯವಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!