ಬ್ರಹ್ಮಾವರ: ಗುಂಡು ತುಂಡು ಪಾರ್ಟಿ- ಚುನಾವಣಾ ಅಧಿಕಾರಿಗಳ ದಾಳಿ
ಬ್ರಹ್ಮಾವರ, ಎ.28: ಚೇರ್ಕಾಡಿ ಕ್ರಾಸ್ ಬಳಿಯ ಶ್ಯಾಮರಾಯ ಎಂಬವರ ಮನೆಯಲ್ಲಿ ಪರವಾನಿಗೆ ಇಲ್ಲದೆ ಭೋಜನ ಕೂಟ ಏರ್ಪಡಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿಯಂತೆ ಅಧಿಕಾರಿ ಕುಮಾರ್ ನಾಯ್ಕ ವಿ. ಸ್ಥಳಕ್ಕೆ ಹೋಗಿ ನೋಡಿ ದಾಗ ಸುಮಾರು 40ರಿಂದ 50 ಮಂದಿ ಊಟ ಮಾಡುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳನ್ನು ಕಂಡ ಕೂಡಲೇ ಎಲ್ಲರೂ ಊಟವನ್ನು ಅರ್ಧದಲ್ಲೆ ಬಿಟ್ಟು ಪರಾರಿಯಾದರು. ಸ್ಥಳವನ್ನು ಪರೀಶೀಲಿಸಲಾಗಿ 10 ಸ್ಟೀಲ್ ಟೇಬಲ್, 60 ಪ್ಲಾಸ್ಟಿಕ್ ಕುರ್ಚಿಗಳು, ಮದ್ಯದ ಬಾಟಲ್ ಸೇರಿದಂತೆ ಹಲವು ಸೊತ್ತು ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.