ಮೋದಿಯನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ- ಖರ್ಗೆಗೆ ಈಶ್ವರಪ್ಪ ತಿರುಗೇಟು

ಶಿವಮೊಗ್ಗ, ಏ 28: ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಮೆಚ್ಚಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಖರ್ಗೆಯವರಿಗಿಂತ ಕೆಟ್ಟ ಭಾಷೆಯಲ್ಲಿ ಟೀಕಿಸಬಲ್ಲೆ. ಆದರೆ ಆ ಕೆಲಸ ಮಾಡಲ್ಲ. ಖರ್ಗೆಯವರಿಗೆ ಒಂದು ತೂಕವಿತ್ತು. ಅದಕ್ಕೆ‌ ಎಐಸಿಸಿ ಅಧ್ಯಕ್ಷರಾದರೂ. ಆದರೆ ಈಗ ಏನಾಗಲು ಹೊರಟಿದ್ದಾರೋ ಗೊತ್ತಿಲ್ಲ. ನರೇಂದ್ರ ಮೋದಿ ಅವರನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದೆ‌ ಸ್ಥಾನದಲ್ಲಿ ಇಟ್ಟಿದ್ದೆವು. ಆದರೆ ಇಂಥ ಹೇಳಿಕೆ‌ ನಿರೀಕ್ಷಿಸಿರಲಿಲ್ಲ‌, ಅವರಿಗೆ ಇಂಥ ದುಸ್ಥಿತಿ‌ ಏಕೆ ಬಂತು ಗೊತ್ತಿಲ್ಲ ಎಂದರು.ಇನ್ನು ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಗೂಂಡಾಗಿರಿ ನಡೆಸಿದ್ದು, ಬಕೆಟ್ ನಲ್ಲಿ ಕಲ್ಲು ತುಂಬಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಾವು ಪೊಲೀಸ್ ದೂರನ್ನು ದಾಖಲಿಸಿದ್ದೇವೆ. ಸೋಲುವ ಹತಾಶೆಯಿಂದ ಕಾಂಗ್ರೆಸ್ ಈ ರೀತಿಯ ಕೆಲಸ ಮಾಡುತ್ತಿದೆ ಎಂದಿದ್ದಾರೆ.ಎಲ್ಲರೂ ಅವರ ವಿರುದ್ಧ ಟೀಕೆ ಮಾಡಲು ಜಗದೀಶ್ ಶೆಟ್ಟರ್ ಇಂಟರ್ನ್ಯಾಷನಲ್ ಲೀಡರಾ? ಹುಬ್ಬಳ್ಳಿ ಏನು ಪಾಕಿಸ್ಥಾನದಲ್ಲಿದೆಯಾ? ಎಲ್ಲ ಕ್ಷೇತ್ರಗಳಿಗೆ ಹೋದಂತೆ ನಾಯಕರು ಹುಬ್ಬಳ್ಳಿಗೂ ಹೋಗಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!