ಸರಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಕೊರೋನಾ ವಾರಿಯರ್ಸ್ ಸಮಸ್ಯೆ ಪರಿಹರಿಸಿ: ಕಾಂಚನ್
ಉಡುಪಿ: (ಉಡುಪಿ ಟೈಮ್ಸ್ ವರದಿ) ಕೊರೋನಾ ಬಂದ ನಂತರ ಹಗಳಿರುಲು ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ದುಡಿಯುತ್ತಿದ್ದಾರೆ.ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ಇನ್ನಿತರ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಮನವಿ ಮಾಡಿದ್ದರೂ ಸರಕಾರ ಅಸಡ್ಡೆ ತೋರಿದೆ ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 15 ರಿಂದ ಹಂತ ಹಂತವಾಗಿ ಕೋವಿಡ್ ಸೇರಿದಂತೆ ಇತರ ಸೇವೆಗಳನ್ನು ಸ್ಥಗಿತ ಗೊಳಿಸಲು ನಿರ್ಧರಿಸಲಾಗಿದೆ ಎಂದು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಸರಕಾರಕ್ಕೆ ಎಚ್ಚರಿಸಿದೆ.
ಮುಂದೆಯೂ ಸರಕಾರ ನಮ್ಮ ಮನವಿಗೆ ಸ್ಪಂದಿಸಿದಿದ್ದರೆ ಸೆಪ್ಟೆಂಬರ್ 21 ರಿಂದ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಎಲ್ಲಾ ಸೇವೆ ಸ್ಥಗಿತಗೊಳಿಸುತ್ತೇವೆ. ಅಲ್ಲದೆ 22 ಕ್ಕೆ ಬೆಂಗಳೂರು ಚಲೋ ಜಾಥ ಹಮ್ಮಿಕೊಂಡು ಬೆಂಗಳೂರಿನಲ್ಲಿ ಸರಕಾರಕ್ಕೆ ನಮ್ಮ ಹಕ್ಕೊತ್ತಾಯ ಮಾಡುತ್ತೇವೆ ಸಂಘ ಹೇಳಿಕೊಂಡಿದೆ. ವೈದ್ಯರು ಮುಷ್ಕರ ಹೂಡಿದರೆ ಕೂವಿಡ್ ಸಂಬಂಧಿತ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ಸರಕಾರ ರೋಗಿಗಳ ಜೀವನದಲ್ಲಿ ಆಟವಾಡದೇ ಅವರ ಸಮಸ್ಯೆಗೆ ಸೂಕ್ತ ಸ್ಪಂದಿಸುವಂತೆ ಕಾಂಗ್ರೆಸ್ ಮುಖಂಡ , ನಗರಸಭಾ ಸದಸ್ಯ ರಮೇಶ್ ಕಾಂಚನ್ ಸರಕಾರವನ್ನು ಆಗ್ರಹಿಸಿದ್ದಾರೆ.
|
|
|