ಉಡುಪಿ, ದ.ಕ., ಉ.ಕ. ಜಿಲ್ಲೆಗಳಲ್ಲಿ ಮತ್ತೆ 5 ದಿನ ‘ಯೆಲ್ಲೊ ಅಲರ್ಟ್’
ಬೆಂಗಳೂರು: ಮುಂಗಾರು ಚುರುಕಾಗಿರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆ.15ರಿಂದ 19ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 5 ದಿನ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.
ಮಂಗಳೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಭಟ್ಕಳ 5, ಕುಂದಾಪುರ 4, ಕಾರವಾರ, ಅಂಕೋಲಾ, ಬೆಳ್ತಂಗಡಿ, ಸುಳ್ಯ, ಭಾಗಮಂಡಲ, ಪಾವಗಡ 3, ಉಡುಪಿ, ಕಂಪ್ಲಿ, ತೀರ್ಥಹಳ್ಳಿ, ಮೊಳಕಾಲ್ಮೂರು, ನಂಜನಗೂಡು 2, ಮೂಡುಬಿದರೆ, ಉಪ್ಪಿನಂಗಡಿ, ರಾಯಚೂರು, ಕಲಬುರ್ಗಿ, ಚಾಮರಾಜನಗರ, ಮಾಗಡಿ, ರಾಮನಗರ, ಬಾಗೇಪಲ್ಲಿ, ಹೊಸನಗರ, ಕೊಪ್ಪದಲ್ಲಿ 1 ಸೆಂ.ಮೀ ಮಳೆಯಾಗಿದೆ.