ಕೇಂದ್ರ ಸರ್ಕಾರದಿಂದ ವೀಸಾ ರದ್ದು, ಅಮೆರಿಕಾಗೆ ಹೋಗಲ್ಲ, ಇಲ್ಲಿಯೇ ಇರ್ತೀನಿ- ನಟ ಚೇತನ್

ಬೆಂಗಳೂರು: ನಟ ಚೇತನ್ ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ವೀಸಾ ರದ್ದಾಗಿರುವ ಬಗ್ಗೆ ಅವರಿಗೆ ಕೇಂದ್ರ ಗೃಹ ಇಲಾಖೆ ನೋಟಿಸ್ ಕಳುಹಿಸಿದೆ. ಈ ಕುರಿತು ಮಾತನಾಡಿರುವ ಚೇತನ್, ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ಆದರೆ, ನಾನು ಅಮೆರಿಕಕ್ಕಾಗೆ ಹೋಗಲ್ಲ. ಇಲ್ಲಿಯೇ ಇರ್ತೀನಿ. 15 ದಿನಗಳ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ತಡೆ ತರುತ್ತೇನೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

23 ವರ್ಷ ನಾನು ಇದ್ದಿದ್ದು, ಓದಿದ್ದು ಅಮೆರಿಕಾದಲ್ಲಿ. ಆ ನಂತರ ಸೇವೆ ಸಲ್ಲಿಸಲು ಭಾರತಕ್ಕೆ ಬಂದೆ. 18 ವರ್ಷದಿಂದ ಇಲ್ಲಿಯೇ ಇದ್ದೇನೆ.  ನನ್ನ ತಂದೆ ಮತ್ತು ತಾಯಿ ಭಾರತದವರೆ ಆಗಿರೋದು 2018 ರಲ್ಲಿ ಒಸಿಐ (ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ) ಕೊಟ್ಟಿದ್ದಾರೆ. ಆದರ ಜೊತೆಗೆ ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ ಎಲ್ಲವೂ ಇದೆ. ತೆರಿಗೆ ಕೂಡಾ ಕಟ್ಟುತ್ತಿದ್ದೇನೆ. ಈಗ ತಕ್ಷಣವೇ OCI ರದ್ದು ಮಾಡಿರುವುದಾಗಿ  ನೋಟೀಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ ಎಂದಿದ್ದಾರೆ.

ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಹೋರಾಟ ಮಾಡಿ ಆದಿವಾಸಿಗಳಿಗಾಗಿ 528 ಮನೆಗಳನ್ನ ಕಟ್ಟಿಸಿದ್ದೇವೆ. ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದಿದ್ದಾರೆ. ಬ್ರಾಹ್ಮಣ್ಯ ಲಾಭೀ ಎನ್ನುವ ಮಾತು ಹೇಳಿದ್ದಕ್ಕೆ  ಕೇಸ್ ಹಾಕಿದ್ದಾರೆ. ಗನ್​ಮ್ಯಾನ್​ನನ್ನು ಒಂದುವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಅಂತ ಮೂರು ದಿನ ಜೈಲಿಗೆ ಕಳಿಸಿದ್ದರು ಎಂದಿದ್ದಾರೆ. ಲಾಯರ್ ಬಳಿ ಮಾತನಾಡಿದ್ದು, ಒಸಿಐ ರದ್ದತಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಚೇತನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!