ಶಾರ್ಜಾ: 16ನೇ ಅಂತಸ್ತಿನಿಂದ ಜಿಗಿದು ಭಾರತೀಯ ಮಹಿಳೆ ಆತ್ಮಹತ್ಯೆ
ಶಾರ್ಜಾ: 26 ವರ್ಷದ ಭಾರತೀಯ ಮೂಲದ ಮಹಿಳೆಯೊಬ್ಬರು ಶಾರ್ಜಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಾವನಾ ರಾಮ್ ಮೃತ ಮಹಿಳೆ. ಅಲ್ ಮಝಾ ಪ್ರದೇಶದ ಅಪಾರ್ಟ್ಮೆಂಟ್ ನ 16 ನೇ ಅಂತಸ್ತಿನಿಂದ ಜಿಗಿದು ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾರಂಭಿಕ ವರದಿಗಳ ಪ್ರಕಾರ ಇದು ಆತ್ಮಹತ್ಯೆ ಇರಬಹುದು ಎಂದು ಅಧಿಕಾರಿಗಳು ಖಲೀಜ್ ಟೈಮ್ಸ್ ಗೆ ಹೇಳಿಕೆ ನೀಡಿದ್ದಾರೆ. ಭಾವನ ವಿವಾಹಿತ ಮಹಿಳೆಯಾಗಿದ್ದು, ಒಂದು ಮಗು ಇತ್ತು. ಆತ್ಮಹತ್ಯೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.