ಉಡುಪಿ: ಮತ್ತೆ ಕೊರೋನಾ ಸುನಾಮಿ, 27 ಮಂದಿಯಲ್ಲಿ ಸೋಂಕು ದೃಢ, ರಾಜ್ಯದಲ್ಲಿ 2,493ಕ್ಕೆ ಏರಿಕೆ

ಉಡುಪಿ: ಜಿಲ್ಲೆಯಲ್ಲಿ ಮುಂಬೈನಿಂದ ಬಂದ ಪ್ರಯಾಣಿಕರಲ್ಲಿ ಮುಂದುವರಿದ ಕೊರೋನಾ ಸೋಂಕು, ಜಿಲ್ಲೆಯಲ್ಲಿ ಒಟ್ಟು 27 ಮಂದಿಯಲ್ಲಿ ಕೊರೋನಾ ಸೋಂಕು ಪಾಸಿಟಿವ್ ದೃಢವಾಗಿದೆ, ಇದರಿಂದ ಜಿಲ್ಲೆಯಲ್ಲಿ ಒಟ್ಟು147 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರದಿಂದ ಬಂದ 24 ಜನರಲ್ಲಿ ಕೇರಳದಿಂದ ಬಂದ ಓರ್ವರಿಗೆ ಹಾಗೂ ತೆಲಂಗಾಣದಿಂದ ಬಂದ ಇಬ್ಬರಲ್ಲಿ ಕೊರೊನಾ ದೃಢವಾಗಿದೆ. ನೆರೆಯ ದ.ಕ. ಜಿಲ್ಲೆಯಲ್ಲಿ ಮುಂಬೈನಿಂದ ಬಂದ 6 ಮಂದಿ ಪ್ರಯಾಣಿಕರಲ್ಲಿ ಪಾಸಿಟಿವ್ ದೃಢವಾಗಿದೆ

ರಾಜ್ಯದಲ್ಲಿಂದು ಮತ್ತೆ ಹೊಸದಾಗಿ 75 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 2493ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಮಾಹಿತಿ ನೀಡಿದೆ. 

ಉಡುಪಿಯಲ್ಲಿ 27, ಹಾಸನದಲ್ಲಿ 13 ಹಾಗೂ ಬೆಂಗಳೂರಿನಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ 2, ಕಲಬುರಗಿಯಲ್ಲಿ 3, ರಾಯಚೂರಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 6, ಚಿಕ್ಕಮಗಳೂರಿನಲ್ಲಿ 3, ಚಿತ್ರದುರ್ಗದಲ್ಲಿ 6, ಯಾದಗಿರಿಯಲ್ಲಿ 7 ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಸೋಂಕು ಪತ್ತೆಯಾಗಿರುವ 7 ಮಂದಿಯ ಪೈಕಿ ಮಂಗನಪಾಳ್ಯದ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ವಿದೇಶದಿಂದ ಬಂದಿರುವ ವ್ಯಕ್ತಿಯೋರ್ವರಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಇವರಲ್ಲಿ ದೆಹಲಿ ಹಾಗೂ ಮುಂಬೈ ಆಗಮಿಸಿದ ಸೋಂಕಿತರು ಹೆಚ್ಚಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 49 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 809 ಮಂದಿ ಗುಣಮುಖರಾಗಿದ್ದು, 1635 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

.

Leave a Reply

Your email address will not be published. Required fields are marked *

error: Content is protected !!