ಕಾರ್ಕಳ: ಇನ್‌ಸ್ಪೆಕರ್ ಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಎಎನ್‌ಎಫ್ ಹೆಡ್‌ಕಾನ್‌ಸ್ಟೆಬಲ್
ಕಾರ್ಕಳ: ಎಎನ್‌ಎಫ್ ಹೆಡ್‌ಕಾನ್‌ಸ್ಟೆಬಲ್‌ನೊರ್ವ ಇನ್‌ಸ್ಪೆಕರ್ ಮತ್ತು ಸಿಬ್ಬಂದಿಗಳಿಗೆ ಸರ್ವಿಸ್ ಪಿಸ್ತೂಲ್‌ನ್ನು ತೆಗೆದು ಬೆದರಿಸಿದ್ದು, ಮಾತ್ರವಲ್ಲದೆ ಅಕ್ರಮ ಸ್ಫೋಟಕ ಹಿಡಿದು ಕ್ಯಾಂಪ್‌ನ್ನು ಸ್ಫೋಟಿಸುವುದಾಗಿ ಹೆದರಿಸಿದ ಬಗ್ಗೆ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಎ.ಎನ್.ಎಪ್ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ಹೆಡ್‌ಕಾನ್ಸ್ಟೇಬಲ್ ಆನಂದ ಎಸ್. ಪಾಟೀಲ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಇಲಾಖಾ ಶ್ವಾನವನ್ನು ಹಿಡಿದುಕೊಂಡು ಎ.ಎನ್.ಎಫ್ ಕ್ಯಾಂಪ್‌ನ ಗೇಟ್‌ನ ಎದುರುಗಡೆಗೆ ಕುತಳಿತುಕೊಂಡ್ಡಿದ್ದ, ಈ ಸಂದರ್ಭ ಏಕಾಏಕಿ ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಇಲಾಖಾ ಪಿಸ್ತೂಲನ್ನು ಹೊರತೆಗೆದು ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೈಷಮ್ಯದಿಂದ ಎ.ಎನ್. ಎಪ್. ಕ್ಯಾಂಪ್‌ನ ಗೇಟ್ ಬಳಿ ಪಹರೆ ಕರ್ತವ್ಯದಲ್ಲಿ ಇದ್ದ ಇನ್‌ಸ್ಪೆಕರ್, ಸಿಬ್ಬಂದಿಯವರಿಗೆ ಬೆದರಿಕೆ ಹಾಕಿದ್ದ.
ಆಗ ಅಲ್ಲಿಯೇ ಇದ್ದ ಇನ್‌ಸ್ಪೆಕರ್ ಸುನಿಲ್ ಎಂ ಕುಮಾರ್ ಹೆಡ್‌ಕಾನ್ಸ್ಟೇಬಲ್ ಆನಂದನನ್ನು ಸಮಾಧಾನ ಮಾಡಿ ಪಿಸ್ತೂಲನ್ನು ಕಸಿದುಕೊಂಡರು. ನಂತರ ಆರೋಪಿ ಎಲ್ಲಿಂದಲೋ ತಂದ ಸ್ಪೋಟಕ ವಸ್ತುಗಳನ್ನು ಕೈಚೀಲದಲ್ಲಿ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿ ಎ.ಎನ್.ಎಫ್ ಕ್ಯಾಂಪ್‌ನ ಮುಂಭಾಗದ ಗೇಟ್ ಬಳಿ ಕುಳಿತುಕೊಂಡು ಸದ್ರಿ ಸ್ಪೋಟಕಗಳನ್ನು ಸ್ಪೋಟಿಸುತ್ತೇನೆ ಎಂಬುದಾಗಿ ಗೇಟ್ ಬಳಿ ಪಹರೆ ಕರ್ತವ್ಯದಲ್ಲಿ ಇದ್ದ ಸಿಬ್ಬಂದಿಯವರಿಗೆ ಬೆದರಿಕೆ ಹಾಕಿ ಕ್ಯಾಂಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಯವರಿಗೆ ಅಪಾಯ ಮತ್ತು ಭೀತಿಯನ್ನುಉಂಟು ಮಾಡಿದ್ದಾಗಿ ಇನ್‌ಸ್ಪೆಕರ್ ಸುನಿಲ್ ಎಂ ಕುಮಾರ್ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಆನಂದ್ ವಿರುದ್ಧ ದೂರು ನೀಡಿದ್ದಾರೆ.
ಎ.ಎನ್.ಎಫ್ ಡಿವೈಎಸ್ಪಿ ಗಣೇಶ್ ಹೆಗಡೆ ಮೇಲಿನ ಸಿಟ್ಟಿನಿಂದ ಆರೋಪಿ ಆನಂದ್ ಈ ರೀತಿಯಾಗಿ ವರ್ತಿಸಿದ್ದಾಗಿ ಎ.ಎನ್.ಎಫ್ ಸಿಬ್ಬಂದಿ ಹೇಳಿಕೊಂಡಿದ್ದಾರೆ.