ಡ್ರಗ್ಸ್ ಮುಕ್ತ ಉಡುಪಿ: ಬಿಜೆಪಿ ಯುವ ಮೋರ್ಚಾ ಮನವಿ
ಉಡುಪಿ : ಮಾದಕ ವಸ್ತುಗಳ ಪಿಡುಗು ಇತ್ತೀಚೆಗೆ ಇಡೀ ದೇಶದಲ್ಲಿ ವ್ಯಾಪಕವಾಗಿ ಆವರಿಸಿ ಯುವ ಜನತೆಯನ್ನು ಪ್ರಭಾವವಾಗಿ ಆವರಿಸಿರುವುದು ದುಖಃಕರ ಸಂಗತಿಯಾಗಿದೆ. ಕೇವಲ ಯುವ ಜನತೆ ಮಾತ್ರವಲ್ಲ ಲಿಂಗಬೇಧವಿಲ್ಲದೆ ಎಲ್ಲಾ ವಯೋಮಾನದವರು ಸಹ ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಆದುದರಿಂದ ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಗ್ಗೆ ಕಠಿಣ ಕ್ರಮಕೈಗೊಂಡು ಉಡುಪಿ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಯವರಾದ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಿತ್ ಶೆಟ್ಟಿ ಹೆರ್ಗ, ಶರತ್ ಶೆಟ್ಟಿ ಉಪ್ಪುಂದ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಕಾಪು, ಸುಮಿತ್ ಮಡಿವಾಳ ಕಾರ್ಕಳ, ಅವಿನಾಶ್ ಕಾರ್ಕಳ, ಅಭಿರಾಜ್ ಸುವರ್ಣ, ಅನುರ್ ಮೆಂಡನ್, ಕೋಶಾಧಿಕಾರಿ ಯತೀಶ್ ಕೋಟ್ಯಾನ್ ಮಟ್ಟು ಮತ್ತು ಜಿಲ್ಲಾ ಹಾಗೂ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.