ಹೊಲಿಗೆ ಮಳಿಗೆಯಲ್ಲೇ ಮಾಲಕ ಡೆತ್ ನೋಟ್ ಬರೆದು ಆತ್ಮಹತ್ಯೆ

ಉಳ್ಳಾಲ: ತೊಕ್ಕೊಟ್ಟು ಪೇಟೆಯಲ್ಲಿರುವ ಹೊಲಿಗೆ ಸಂಬಂಧಿತ ಮಳಿಗೆಯೊಂದರ ಮಾಲಕ ತನ್ನ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಕನೀರುತೋಟದ ನಿವಾಸಿ ಪ್ರವೀಣ್ ಆಳ್ವ (45) ಆತ್ಮಹತ್ಯೆಗೈದ ಅಂಗಡಿ ಮಾಲಕ.

ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್ ಗಳಿಗೆ ಸಂಬಂಧಿಸಿದ ಹೊಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು‌ ಬೆಳಗ್ಗೆ 6.30ಕ್ಕೆ ಮನೆಯಿಂದ ಹೊರಟಿದ್ದು, ಅಂಗಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಅವರು  ಆತ್ಮಹತ್ಯೆಗೈದ ಸ್ಥಳದಲ್ಲಿ ಚೀಟಿಯೊಂದರಲ್ಲಿ‌ ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಬರೆದಿದ್ದಾರೆ ಎಂದು ಹೇಳಲಾಗಿದೆ. ಮೃತರು ತಾಯಿ, ಪತ್ನಿ ಪುತ್ರನನ್ನು ಅಗಲಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!