ಹೂವಿನ ಬೆಳೆಗಾರರ ಸಹಕಾರ ಸಂಘ: ಏ.10 ರಂದು ಹೆಬ್ರಿ ಶಾಖೆ ಉದ್ಘಾಟನೆ

ಹೆಬ್ರಿ: ಕಾರ್ಕಳ ಅನಂತಶಯನ ಎಪಿ ಟವರ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ 3 ವರ್ಷದ ಹಿಂದೆ ಸ್ಥಾಪನೆಯಾಗಿರುವ ವಿಶೇಷ ಪರಿಕಲ್ಪನೆಯ ಹೂವಿನ ಬೆಳೆಗಾರರ ಸಹಕಾರ ಸಂಘದ ಹೆಬ್ರಿ ಶಾಖೆಯು ಏ. 10 ರಂದು 3 ಗಂಟೆಗೆ ಹೆಬ್ರಿ ವಿನೂನಗರ ಪುಪ್ಪಾ ಕಾಂಪ್ಲೇಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.

ಮಲ್ಲಿಗೆ ಹೂ ಸಹಿತ ವಿವಿಧ ಹೂವಿನ ಬೆಳೆಗಾರರಿಗೆ ವಿವಿಧ ಸೌಲಭ್ಯ ಮತ್ತು ಸರ್ಕಾರದ ಸವಲತ್ತು ದೊರಕಿಸುವ ಯೋಜನೆಯೊಂದಿಗೆ ಜಿಲ್ಲಾ ಮಟ್ಟದ ಮಾನ್ಯತೆ ಹೊಂದಿರುವ ನಮ್ಮ ಸಂಸ್ಥೆಯಲ್ಲಿ 900ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. 3 ಕೋಟಿ ರೂ. ವ್ಯವಹಾರ ನಡೆಯುತ್ತಿದೆ.

ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಮಟ್ಟದ ಸಾಧನೆ ಮಾಡಿ ವ್ಯವಹಾರವನ್ನು ವಿಸ್ತರಿಸಿ ಗ್ರಾಹಕರ ಅನುಕೂಲಕ್ಕಾಗಿ ಹೆಬ್ರಿಯಲ್ಲಿ ನೂತನ ಶಾಖೆಯನ್ನು ಆರಂಭಿಸುತ್ತಿದ್ದೇವೆ ಎಂದು ಹೂವಿನ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಫ್ರಾನ್ಸಿಸ್‌ ಡಿಸೋಜ ತಿಳಿಸಿದರು.

ಚಾಲ್ತಿ ಖಾತೆ, ಉಳಿತಾಯ ಖಾತೆ, ನಿರಖು ಠೇವಣಿ, ಆವರ್ತಿತ ಠೇವಣಿ, ನಿತ್ಯನಿಧಿ ಠೇವಣಿ, ವಾಹನಾ, ಗೃಹ ಮತ್ತು ಚಿನ್ನಾಭರಣ ಸಾಲ, ವೇತನ ಸಾಲ, ಸ್ವಸಹಾಯ ಸಂಘಗಳ ಸಾಲ, ನಿತ್ಯನಿಧಿ ಠೇವಣಿ ಸಾಲ, ವ್ಯಾಪಾರ ವ್ಯವಹಾರ ಸಾಲ, ಇ- ಸ್ಟಾಂಪಿಂಗ್‌, ಪಾನ್‌ಕಾರ್ಡ್‌, ನೆಷ್ಟ್‌ಮತ್ತು ಆರ್‌ಟಿಜಿಎಸ್‌ಸಹಿತ ಹಲವು ಸವಲತ್ತುಗಳು ಸಂಸ್ಥೆಯಲ್ಲಿ ದೊರೆಯಲಿದೆ.

ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕ ಅರುಣ್‌ಕುಮಾರ್‌ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಸಮಾಜ ಸೇವಕ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿಯ ಎಚ್.‌ ಭಾಸ್ಕರ ಜೋಯಿಸ್‌ ಮತ್ತು ಅಜೆಕಾರು ಚರ್ಚ್‌ಪ್ರಧಾನ ಧರ್ಮಗುರು ಫಾ. ಪ್ರವೀಣ್‌ ಅಮೃತ್‌ಮಾರ್ಟಿಸ್‌ ಆಶೀರ್ವಚನ ನೀಡುವರು.

ಉಡುಪಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ಭದ್ರತಾ ಕೊಠಡಿ, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಗಣಕಯಂತ್ರ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಇ – ಸ್ಟಾಪಿಂಗ್‌ಉದ್ಘಾಟಿಸುವರು. ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಹೆಬ್ರಿ ಎಪಿಎಂ ಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರವೀಣ್‌ಬಲ್ಲಾಳ್‌, ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ ಬಾಯರಿ, ಉದ್ಯಮಿ ಹೆಬ್ರಿ ಸತೀಶ ಪೈ, ಕಟ್ಟಡದ ಮಾಲಕ ಚಂದ್ರ ನಾಯ್ಕ್‌, ಸಮಾಜ ಸೇವಕಿ ಅನಿತಾ ಡಿಸೋಜ ಬೆಳ್ಮಣ್‌, ಸಂಘದ ಉಪಾಧ್ಯಕ್ಷ ನವೀನ್‌ ಶೆಣೈ, ಆಡಳಿತ ಮಂಡಳಿಯ ನಿರ್ದೇಶಕರುಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ಫ್ರಾನ್ಸಿಸ್‌ ಡಿಸೋಜ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!