‘ಆಪರೇಷನ್ ಆಲ್ ಔಟ್’ 18 ಭಯೋತ್ಪಾದಕರು ಹತ, 108 ಸ್ಥಳೀಯ ಕಾರ್ಯಕರ್ತರ ಬಂಧನ
ಜಮ್ಮು: ‘ಆಪರೇಷನ್ ಆಲ್ ಔಟ್’ ಕಾರ್ಯಾಚರಣೆಯಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗಿನಿಂದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗಳ ಹಿರಿಯ ಕಮಾಂಡರ್ ಗಳು ಸೇರಿದಂತೆ ಅನೇಕ ಉಗ್ರರನ್ನು ನಿರ್ನಾಮ ಮಾಡಿವೆ.
‘ಆಪರೇಷನ್ ಆಲ್ ಔಟ್’ ಭಾಗವಾಗಿ, ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳು ಆಗಸ್ಟ್ ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಕೆಲ ಭಾಗಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳ 18 ಉಗ್ರರನ್ನು ಹತ್ಯೆ ಮಾಡಿವೆ.
ಆಪರೇಷನ್ ಆಲ್ ಔಟ್’ನ ಭಾಗವಾಗಿ ಮಹತ್ವದ ಹೋರಾಟ ಮತ್ತು ಶೋಧ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ವಿಶೇಷವಾಗಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಮುಖ ಯಶಸ್ಸನ್ನು ಸಾಧಿಸಿದ್ದೇವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.