ಬ್ರಹ್ಮಾವರ: ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣು
ಬ್ರಹ್ಮಾವರ: ಮಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ತಾಯಿ ನೇಣಿಗೆ ಶರಣಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಎ.7ರಂದು ನಡೆದಿದೆ.
62ವರ್ಷದ ಆಶಾಲತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ದತ್ತು ಪುತ್ರಿಯಾದ ಶಮೀಕ್ಷಾ ಎಂಬವರೊಂದಿಗೆ ವಾಸವಾಗಿದ್ದು, ಅವರ ಗಂಡ ಮೃತಪಟ್ಟಿದ್ದರು. ತಾಯಿ ಆಶಾಲತಾ ಹಾಗೂ ಮಗಳು ಶಮೀಕ್ಷಾಳಿಗೆ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯಾಗಿತ್ತು. ಇದೇ ವಿಚಾರದಲ್ಲಿ ಮನನೊಂದ ಆಶಾಲತಾ ಅವರು ನಿನ್ನೆ ಮಗಳಿಗೆ ‘ತಾನು ಸಾಯುತ್ತೇನೆ ಎಂದು’ ವಾಟ್ಸಪ್ ಸಂದೇಶ ಕಳುಹಿಸಿ, ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ, ಮೃತ ಆಶಾಲತಾ ಅವರ ತಂಗಿ ಜ್ಯೋತಿಪ್ರಭಾ ಅವರು ಮರಣದಲ್ಲಿ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.