ಮಾಜಿ ಸಂಸದ ದಿ.ಧ್ರುವ ನಾರಾಯಣ್ ಪತ್ನಿ ವಿಧಿವಶ
ಮೈಸೂರು- ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಮಾಜಿ ಸಂಸದ ದಿವಂಗತ ಧ್ರುವ ನಾರಾಯಣ್ ಪತ್ನಿ ವಿಧಿವಶರಾಗಿದ್ದಾರೆ.
ಧ್ರುವ ನಾರಾಯಣ್ ಪತ್ನಿ ವೀಣಾ ಮೃತರಾಗಿದ್ದಾರೆ. ಅವರಿಗೆ 54 ವರ್ಷವಾಗಿತ್ತು. ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಪತಿ ನಿಧನರಾಗಿ ಕೇವಲ 28 ದಿನಕ್ಕೆ ಪತ್ನಿ ವಿಧಿವಶರಾಗಿದ್ದಾರೆ.
ಮೈಸೂರಿನ ವಿಜಯನಗರದ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.