ಮಣಿಪಾಲ: ಗಾಂಜಾ ಸೇವನೆ- ಆರು ಮಂದಿ ವಶಕ್ಕೆ
ಮಣಿಪಾಲ ಎ.6(ಉಡುಪಿ ಟೈಮ್ಸ್ ವರದಿ): ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ ಪೊಲೀಸರು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಠಾಣಾ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ, ಠಾಣಾ ವ್ಯಾಪ್ತಿಯ ವಿದ್ಯಾರತ್ನ ನಗರದ ಅರ್ಪಾರ್ಟ್ಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದಿಲೀಪ್ ಶೆಟ್ಟಿ (21), ಆದಿತ್ಯ ರಾಜ್ (20) ಎಂಬ ಇಬ್ಬರನ್ನು ಹಾಗೂ 80 ಬಡಗುಬೆಟ್ಟ ಗ್ರಾಮದ ದಶರಥ ನಗರದ ಹೊಟೇಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಆಶಿಶ್ ಕುಮಾರ್ (23) ಎಂಬಾತನನ್ನು, ಮಣಿಪಾಲದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಆನಂದ್ ಶಂಕರ್ D.S (20), ವಿಷ್ಣು ವಿನು (19),ದೇವನಾರಾಯಣ ಎ (20) ಎಂಬ ಮೂವರನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು, ಮಣಿಪಾಲ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದರು. ವೈದ್ಯಾಧಿಕಾರಿಗಳು ನೀಡಿರುವ ಪರೀಕ್ಷಾ ವರದಿಯಲ್ಲಿ ಈ 6 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.