ಉಡುಪಿ: ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್- ಕೃಷ್ಣಮೂರ್ತಿ ಅಭಿಮಾನಿಗಳಿಂದ ಮಹತ್ವದ ಸಭೆ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂದು ಪ್ರಬಲ ಆಕಾಂಕ್ಷಿಯಾಗಿದ್ದ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಟಿಕೆಟ್ ತಪ್ಪಿದ್ದು ಅವರ ಅಭಿಮಾನಿಗಳಿಂದ ಉಡುಪಿಯ ಹೊಟೇಲ್ ಮಥುರಾದಲ್ಲಿ ಇಂದು ಸಂಜೆ ತುರ್ತು ಸಭೆ ಆಯೋಜನೆ.

ಉಡುಪಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದು ತನ್ನದೇ ತಂಡವನ್ನು ರಚಿಸಿಕೊಂಡಿದ್ದರು. ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಈ ಬಾರಿ ಟಿಕೆಟ್ ಸಿಗುತ್ತದೆ ಎಂದು ಅವರ ಅಭಿಮಾನಿಗಳು ನಂಬಿದ್ದರು.

ಆದರೇ ಇಂದು ಕೆಪಿಸಿಸಿ ಘೋಷಿಸಿದ ಪಟ್ಟಿಯಲ್ಲಿ ಮಹಿಳಾ ಕಾಂಗ್ರೆಸ್ ಸಾರಥ್ಯ ವಹಿಸಿದ್ದ, ಎರಡು ಬಾರಿ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸರಳಾ ಕಾಂಚನ್ ಅವರ ಪುತ್ರ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಉಡುಪಿ ಕ್ಷೇತ್ರದ ಟಿಕೆಟ್ ದೊರಕಿದೆ.

ಈ ನಿರ್ಧಾರದ ವಿರುದ್ಧ ಕೃಷ್ಣಮೂರ್ತಿ ಅವರ ಅಭಿಮಾನಿಗಳು ಇಂದು ಕೃಷ್ಣ ಮಠದ ಪಾರ್ಕಿಂಗ್ ಬಳಿಯ ಮಥುರಾ ಕಂಫರ್ಟ್ ಸಭಾಂಗಣದಲ್ಲಿ ಸಂಜೆ 5ಕ್ಕೆ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಕೃಷ್ಣಮೂರ್ತಿ ಅವರ ಮುಂದಿನ ನಡೆಯ ಬಗ್ಗೆ ಅಭಿಮಾನಿಗಳು ನಿರ್ಧಾರಿಸಲಿದ್ದಾರೆ ಎಂದು ತಿಳಿದುಬಂದಿದೆ.

1 thought on “ಉಡುಪಿ: ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್- ಕೃಷ್ಣಮೂರ್ತಿ ಅಭಿಮಾನಿಗಳಿಂದ ಮಹತ್ವದ ಸಭೆ

  1. This is the problem of Congress party. They forget the good and sincere hard workers then they loose the winning seat.

Leave a Reply

Your email address will not be published. Required fields are marked *

error: Content is protected !!