ಮಣಿಪಾಲ: ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 100 ಮೂಟೆ ಭತ್ತ ವಶಕ್ಕೆ

ಮಣಿಪಾಲ, ಏ 05: ಸಮರ್ಪಕವಾದ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 100 ಮೂಟೆ ಭತ್ತ ತುಂಬಿದ ಗೋಣಿ ಚೀಲವನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಮಣಿಪಾಲ ಎಂಐಟಿ ಜಂಕ್ಷನ್‌ ಬಳಿ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ರುಕ್ಮ ನಾಯ್ಕ್‌ ಬುಧವಾರ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪರ್ಕಳ ಕಡೆಯಿಂದ ಮಣಿಪಾಲದ ಕಡೆಗೆ KA-31-4536 ಲಾರಿಯ ಚಾಲಕ ಡೇನಿಲ್‌ ಆಂತೋನಿ ಫೆರ್ನಾಂಡೀಸ್‌ ಎಂಬಾತ ಹಳಿಯಾಳದಿಂದ ಬೆಳ್ತಂಗಡಿ ತಾಲೂಕಿನ ಮಾರುತಿಪುರದ ಅಕ್ಕಿ ಮಿಲ್‌ ಗೆ ಸಮರ್ಪಕವಾದ ದಾಖಲಾತಿ ಇಲ್ಲದೇ 100 ಮೂಟೆ ಭತ್ತ ತುಂಬಿದ ಗೋಣಿ ಚೀಲ ಸಾಗಾಟ ಮಾಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!