ಕ್ರೈಸ್ತ ಸಮುದಾಯ ಗುರಿಯಾಗಿಸಿ ಕೋಮು ಗಲಭೆಗೆ ಪ್ರಚೋದನೆ-ಸಚಿವ ಮುನಿರತ್ನ ವಿರುದ್ಧ ಎಫ್‌ಐಆರ್
ಬೆಂಗಳೂರು, ಎ.6: ಸಚಿವ ಮುನಿರತ್ನ ವಿರುದ್ಧ ಕೋಮು ಗಲಭೆ ಆರೋಪದ ಮೇಲೆ ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕ್ರೈಸ್ತ ಸಮುದಾಯದವರನ್ನು ಗುರಿಯಾಗಿಸಿ ಕೋಮು ಗಲಭೆಗೆ ಪ್ರಚೋದಿಸಿದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನ ಹಿನ್ನಲೆ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿರುವ ಚುನಾವಣೆ ಆಯೋಗದ ಅಧಿಕಾರಿ ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ನೀಡಿದ ದೂರಿನ್ವಯ ಎಫ್ ಐಆರ್ ದಾಖಲಾಗಿದೆ.
ಸಚಿವ ಮುನಿರತ್ನ ವಿರುದ್ಧ ಅಖಿಲ ಭಾರತ ಕ್ರೈಸ್ತ ಮಹಾಸಭಾ ಮತ್ತು ಖಾಸಗಿ ದೂರದರ್ಶನ ವಾಹಿನಿ ಭಿತ್ತರಿಸಿರುವ ಅಂಶಗಳ ಆಧಾರ ಹಾಗೂ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದವರನ್ನು ಹೊಡೆದು ಓಡಿಸಿ ಎಂದು ಕೋಮು ದ್ವೇಷ ಭಾಷಣ ಮಾಡಿ ಅಲ್ಪಸಂಖ್ಯಾತ ಕ್ರೈಸ್ತರ ಗೌರವ ಹಾಗೂ ಹಕ್ಕುಗಳಿಗೆ ಚ್ಯುತಿ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದೆ.
Respect all religion…. No Holy scriptures teaches hatred or hurt your fellow beings.. follow your Holy scriptures and help humanity……