ಬಸ್ರೂರು: ರೋಜರಿ ಕ್ರೆಡಿಟ್ ಸೊಸೈಟಿಯ ನೂತನ ಶಾಖೆಯ ಕಟ್ಟಡಕ್ಕೆ ಶಿಲಾನ್ಯಾಸ
ಕುಂದಾಪುರ : ರಾಜ್ಯಮಟ್ಟದ ಉತ್ತಮ ಸಹಕಾರ ಸಂಸ್ಥೆ ಪ್ರಶಸ್ತಿ ಪುರಸ್ಕತ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ., ತನ್ನ ನೂತನ ಬಸ್ರೂರು ಶಾಖೆಯ ಸ್ವಂತ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ.ವಂ.ಸ್ಟ್ಯಾನಿ ತಾವ್ರೊ ಮತ್ತು ಬಸ್ರೂರು ದೇವಾಲಯದ. ಧರ್ಮಗುರು ವಂ. ಚಾಲ್ರ್ಸ್ ನೊರೊನ್ಹಾ ಜಂಟಿಯಾಗಿ ನೂತನ ಕಟ್ಟಡದ ಭೂಮಿ ಪೂಜೆಯ ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿದರು.
ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಜಾನ್ಸನ್ ಡಿ’ಆಲ್ಮೆಡಾ, ಉಪಾಧ್ಯಕ್ಷ ಕಿರಣ್ ಲೋಬೊ, ಬಸ್ರೂರು ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ ಡಿಕೋಸ್ತಾ ಶಿಲಾನ್ಯಾಸಗೈದರು.
ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ವಿಲ್ಫ್ರೆಡ್ ಮಿನೇಜೆಸ್, ಪ್ರಕಾಶ್ ಲೋಬೊ, ಬ್ಯಾಪ್ಟಿಸ್ಟ್ ಡಾಯಸ್, ಸೊಸೈಟಿಯ ಪ್ರಧಾನ ನಿರ್ವಹಣ ವ್ಯವಸ್ಥಾಪಕ ಪಾಸ್ಕಲ್ ಡಿಸೋಜಾ, ಬಸ್ರೂರು ಚರ್ಚಿನ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕ ಎಲ್ರೊಯ್ ಕಿರಣ್ ಕ್ರಾಸ್ತಾ, ರೋಜರಿ ಸೊಸೈಟಿ ಶಾಖಾ ವ್ಯವಸ್ಥಾಪಕರು ಮತ್ತು ಸೊಸೈಟಿ ಸಿಬಂದಿ ವರ್ಗದವರು, ಕಥೊಲಿಕ್ ಸಭಾ ಪದಾಧಿಕಾರಿಗಳು ಮತ್ತು ಮತ್ತಿತರರು ಉಪಸ್ಥಿತರಿದ್ದರು.
ಸೊಸೈಟಿ ನಿರ್ದೇಶಕ ಜೇಕಬ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯು ಸ್ವಂತ ಕಟ್ಟಡವನ್ನು ಹೊಂದುತ್ತಿರುವ ನಾಲ್ಕನೇ ಶಾಖೆಯಾಗಿದ್ದು, ಶೀಘ್ರದಲ್ಲಿ ಬೈಂದೂರು ಶಾಖೆ ಕೂಡ ಸ್ವಂತ ಕಟ್ಟಡವನ್ನು ಹೊಂದಲಿದೆ. ಈಗಾಗಲೇ ಪ್ರಧಾನ ಕಚೇರಿ, ಪಡುಕೋಣೆ ಶಾಖೆ ಮತ್ತು ಸಂತೆಕಟ್ಟೆ ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದಿವೆ.