ಕಾಪು: ಎಸ್ಎಸ್ಎಫ್ ಬ್ಲಡ್ ಸೈಬೋಗೆ ಚಾಲನೆ

ಕಾಪು: ಉಡುಪಿ ಜಿಲ್ಲಾ ಎಸ್ಎಸ್ಎಫ್ ಆಶ್ರಯದಲ್ಲಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸಹಭಾಗಿತ್ವದಲ್ಲಿ, ಎಸ್ಎಸ್ಎಫ್ ಕಾಪು ಡಿವಿಷನ್ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.

ಅಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರ ದುವಾದೊಂದಿಗೆ, ಎಸ್ಎಸ್ಎಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಪಣಿಯೂರು ಅಧ್ಯಕ್ಷತೆಯಲ್ಲಿ ಉಡುಪಿ ಎಸ್ಎಸ್ಎಫ್ ಬ್ಲಡ್ ಸೈಬೋಗೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಉಡುಪಿ ಜಿಲ್ಲಾ ಬ್ಲಡ್ ಸೈಬೋ ಉದ್ಘಾಟನೆಯನ್ನು ಕೋಟೇಶ್ವರ ತಂಙಳ್ ನೆರವೇರಿಸಿದರು.

ಈ ವೇಳೆ ಮಾತಾಡಿದ ಅಶ್ರಫ್ ಸಖಾಫಿ ಕಣ್ಣಂಗಾರ್ ರವರು, ರಕ್ತದಾನ  ಮನುಷ್ಯ ಮನುಷ್ಯರಿಂದ ಮಾತ್ರ ಸಾಧ್ಯವಿರುವ ದಾನವಾಗಿದೆ. ಇಂದಿನ ಕಾಲದಲ್ಲಿ ಎಲ್ಲವನ್ನೂ ಉತ್ಪಾದಿಸಲಾಗುತ್ತದೆ, ಆದರೆ ರಕ್ತ ಮನುಷ್ಯನ ದೇಹದಲ್ಲಿ ಉತ್ಪಾದನೆ ಆಗಲು ಮಾತ್ರ ಸಾಧ್ಯ. ಒಬ್ಬನ ಅನುಮತಿಯಿಲ್ಲದೆ ರಕ್ತದಾನ ಮಾಡಲು ಇಸ್ಲಾಮಿನಲ್ಲಿ ಅವಕಾಶ ಇಲ್ಲ, ಆದ್ದರಿಂದ ರಕ್ತವನ್ನು ನಾವೇ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಸಾಧ್ಯ, ಇಂತಹಾ ರಕ್ತದಾನ ಶಿಭಿರಗಳನ್ನು ಆಯೋಜಿಸುವ ಮೂಲಕ ನಾವು ಮಾನವ ಸ್ನೇಹಿಗಳಾಗೋಣ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು. ಎಸ್ಎಸ್ಎಫ್ ಬ್ಲಡ್ ಸೈಬೋ ರಾಜ್ಯಾದ್ಯಾಂತ ರಕ್ತಧಾನ ಶಿಬಿರ ಆಯೋಜಿಸುವ ಮೂಲಕ ಹಲವಾರು ಜನರಿಗೆ ಆಸರೆಯಾಗಿದೆ ಎಂದು ಎಸ್ಎಸ್ಎಫ್ ಕೋಶಾಧಿಕಾರಿ ಅಬ್ಧುಲ್ ರವೂಫ್ ರಕ್ತದಾನದ ಮಹತ್ವ ತಿಳಿಸಿದರು.

ಪತ್ರಕರ್ತ ಹರೀಶ್ ಹೆಜಮಾಡಿ, ಶುಭಹಾರೈಸಿ ಮಾತಾಡಿ, ಕೊರೊನಾ ವ್ಯಾಪಕವಾಗುತ್ತಿದ್ದು ಜಾಗೃತರಾಗಿ ಇರೋಣ ಎಂದು ಹಿತವಚನ ಹೇಳಿದರು. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ವೈದ್ಯರಾದ ಡಾ.ಶರವಣ್  ರಕ್ತದಾನ ಪ್ಲಾಸ್ಮಾದಾನ, ಅದರಿಂದ ಆಗುವ ಉಪಯೋಗಳ ಬಗ್ಗೆ ಸಂಕ್ಷಪ್ತವಾಗಿ ತಿಳಿಸಿದರು. ಎಸ್ಎಸ್ಎಫ್ ಉಡುಪಿ ಜಿಲ್ಲಾ ಕಾರ್ಯದರ್ಶಿ  ರಹೀಮ್ ನಿರೂಪಿಸಿ, ಕಾರ್ಯದರ್ಶಿ ರಕೀಬ್ ಕಣ್ಣಂಗಾರ್, ಧನ್ಯವಾದವಿತ್ತರು.  

ಉಡುಪಿ ಜಿಲ್ಲಾ ಬ್ಲಡ್ ಸೈಬೋದ ಮುಖ್ಯ ಚೆಯರ್ಮ್ಯಾನ್ ಅಬ್ಧುಲ್ ಮಜೀದ್ ಹನೀಫಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಭಿರಕ್ಕೆ ಚಾಲನೆ ನೀಡಿದರು. ಶಾಹುಲ್ ಹಮೀದ್ ನಯೀಮಿ,  ಅಬ್ಧುಲ್ ರಹಿಮಾನ್ ರಝ್ವಿ ಕಲ್ಕಟ್ಟ,  ಅಶ್ರಫ್ ರಝಾ ಅಮ್ಜದಿ, ಹನೀಫ್ ಹಾಜಿ ಕನ್ನಂಗಾರ್, , ಹಾಜಿ ಕೆ ,ಮುಹುಯ್ಯುದ್ದೀನ್ ಗುಡ್ವೀಲ್, ಅಡ್ವೊಕೇಟ್ ಹಂಝ ಹೆಜಮಾಡಿ, ಕೇಶವ ಪಿ, ಸಾಲ್ಯಾನ್,ಅಬ್ಧುಲ್ ರವೂಫ್ ಮೂಡುಗೋಪಾಡಿ, ಡಾ, ಶರವಣ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!