ವಾರಸುದಾರರಿಲ್ಲದ ರೂ.35,012 ಕೋಟಿ ಠೇವಣಿ ಆರ್‌ಬಿಐಗೆ ವರ್ಗ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ 10.24 ಕೋಟಿ ಖಾತೆಗಳಲ್ಲಿ 2023ರ ಫೆಬ್ರುವರಿವರೆಗೆ ಇದ್ದ, ವಾರಸುದಾರರಿಲ್ಲದ ರೂ.35,012 ಕೋಟಿ ಠೇವಣಿಯನ್ನು ಆರ್‌ಬಿಐಗೆ ವರ್ಗಾಯಿಸಲಾಗಿದೆ
ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯಸಚಿವ ಭಾಗವತ್‌ ಕರಾಡ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ.

10 ವರ್ಷದಿಂದ ಈ ಖಾತೆಗಳಲ್ಲಿ ಯಾವುದೇ ವಹಿವಾಟು ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ವಾರಸುದಾರರು ಇಲ್ಲದ ಠೇವಣಿಗಳನ್ನು ಹೊಂದಿರುವ ಬ್ಯಾಂಕ್‌ಗಳ ಪೈಕಿ ಎಸ್‌ಬಿಐ ಮೊದಲ ಸ್ಥಾನದಲ್ಲಿದೆ. ಎಸ್‌ಬಿಐನಲ್ಲಿ ರೂ.8,086 ಕೋಟಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ರೂ.5,340 ಕೋಟಿ, ಕೆನರಾ ಬ್ಯಾಂಕ್‌ನಲ್ಲಿ ರೂ.4,558 ಕೋಟಿ ಮತ್ತು ಬ್ಯಾಂಕ್‌ ಆಫ್‌ ಬರೋಡದಲ್ಲಿ ರೂ.3,904 ಕೋಟಿ ವಾರಸುದಾರರಿಲ್ಲದ ಠೇವಣಿ ಇತ್ತು

Leave a Reply

Your email address will not be published. Required fields are marked *

error: Content is protected !!