ಕುಂದಾಪುರಕ್ಕೆ ಕೊಡ್ಗಿ, ಉಡುಪಿಗೆ ಯಶ್ಪಾಲ್, ಕಾಪು ಗುರ್ಮೆ- ಲಾಲಾಜಿ, ಭಟ್‌ಗೆ ಕೋಕ್?

ಕುಂದಾಪುರ: ಚುನಾವಣಾ ದಿನಾಂಕ ಘೋಷಣೆ ಆದರೂ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗದ ಕಾರಣ ಎಲ್ಲಾ ಪಕ್ಷದ ಕಾರ್ಯಕರ್ತರಲ್ಲಿ ನಮ್ಮ ಕ್ಷೇತ್ರದ ಅಭ್ಯರ್ಥಿ ಯಾರಾಗಬಹುದು ಎಂಬ ಲೆಕ್ಕಾಚಾರದಲ್ಲೇ ಮುಳುಗಿದ್ದಾರೆ.

ಉಡುಪಿಯಲ್ಲಿ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದೆ.ಆದರೆ ಬಿಜೆಪಿಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರದ ಅಭ್ಯರ್ಥಿಗಳ ಬದಲಾವಣೆ ಖಂಡಿತ ಎನ್ನುವ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಅದಕ್ಕೆ ಪೂರಕ ಎಂಬಂತೆ ಕುಂದಾಪುರ ಕ್ಷೇತ್ರದ ಸೋಲಿಲ್ಲದ ಸರದಾರ, ಅಜಾತಶತ್ರು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಈ ಬಾರಿ ಚುನಾವಣಾ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ. ಸದ್ಯ ಅವರ ಬಲಗೈಯಂತಿರುವ ಕಿರಣ್ ಕೊಡ್ಗಿ ಅವರಿಗೆ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಇದಕ್ಕೆ ಹಾಲಿ ಶಾಸಕ ಶ್ರೀನಿವಾಸ್ ಶೆಟ್ಟಿ ಅವರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸ್ವತಃ ಬಿಜೆಪಿ ಹೈಕಮಾಂಡ್ ಹಾಲಾಡಿ ಅವರನ್ನು ಕೆಳಗಿಸಲು ಮನವೊಲಿಸಿತ್ತು. ಅದರಲ್ಲಿ ಸಫಲವಾದಗ ಹಾಲಾಡಿ ಅವರೇ ಷರತ್ತು ಹಾಕಿ ಕಿರಣ್ ಕೊಡ್ಗಿ ಅವರ ಹೆಸರು ಸೂಚಿಸಿದ್ದರು ಎನ್ನಲಾಗಿದೆ.

ಸೋಮವಾರ ಈ ಬಗ್ಗೆ ಮಾಹಿತಿ ತಿಳಿದ ಹಾಲಾಡಿ ಅಭಿಮಾನಿಗಳು ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಭಾಗವಹಿಸಿ ಹಿಂದಿರುಗಿ ಬರುತ್ತಿದ್ದ ಅವರನ್ನು ಮನವೊಲಿಸಲು ಒತ್ತಡ ಹಾಕಿದ್ದಾರೆ.

ಇಂದು ಕೂಡ ಅವರ ಮನೆಯಲ್ಲಿ ಅಭಿಮಾನಿಗಳ ದಂಡು ಸೇರಿದ್ದು, ಈ ಬಾರಿ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದರು.

ಕುಂದಾಪುರದಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಉಡುಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಗೆ ಟಿಕೆಟ್ ತಪ್ಪುವುದು ಖಚಿತ. ಈ ಬಗ್ಗೆ ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಶಾಸಕ ರಘುಪತಿ ಭಟ್ ಗೆ ಟಿಕೆಟ್ ಇಲ್ಲ ಎಂಬ‌ ಸುದ್ದಿಗೆ ಮತ್ತಷ್ಟು ಪುಷ್ಠಿ ದೊರೆಯುತ್ತಿದೆ.

ಆಗ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೊಸ ಮುಖಕ್ಕೆ ಮಣೆ ಹಾಕುವುದು ಹೈಕಮಾಂಡ್ ಲೆಕ್ಕಾಚಾರ ಎನ್ನುವುದು ರಾಜಕೀಯ ಧುರೀಣ ಅಂಬೋಣ.

ಈ ರೇಸ್ ನಲ್ಲಿ ಮೊದಲ ಹೆಸರು ಕೇಳಿಬರುವುದು ಯುವಮುಖಂಡ, ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಕಾರ್ಯದರ್ಶಿ , ಮೊಗವೀರ ಮುಂದಾಳು ಯಶ್ಪಾಲ್ ಸುವರ್ಣ ಅವರ ಹೆಸರು. ಉಡುಪಿ ಕ್ಷೇತ್ರಕ್ಕೆ ಮೊಗವೀರ ಸಮುದಾಯ ಫೈನಲ್ ಆದ್ರೆ ಕಾಪು ಕ್ಷೇತ್ರಕ್ಕೆ ಬಂಟ ಸಮುದಾಯದ ಶುದ್ದಹಸ್ತದ ರಾಜಕಾರಣಿ, ಬಡಬಗ್ಗರ ಬಗ್ಗೆ ಕಾಳಜಿ ಹೊಂದಿರುವ ಸುರೇಶ್ ಶೆಟ್ಟಿ ಗುರ್ಮೆ ಅವರ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.

ಒಂದೊಮ್ಮೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ಕುಂದಾಪುರದಲ್ಲಿ ಬಿಜೆಪಿ ಕಣಕ್ಕೆ ಇಳಿಸಲು ಪ್ರಯತ್ನ ಪಡುವ ಸಾಧ್ಯತೆ ಇದ್ದು, ಅದಕ್ಕೆ ಹಾಲಾಡಿ ಅವರ ಗ್ರೀನ್ ಸಿಗ್ನಲ್ ಸಿಕ್ಕರೆ ಅದು ಮಾತ್ರ ಸಾಧ್ಯ. ಇನ್ನೆರಡು ದಿನಗಳಲ್ಲಿ ಜಿಲ್ಲೆಯ ರಾಜಕೀಯದ ಸ್ಪಷ್ಟ ಚಿತ್ರಣ ದೊರಕುವುದು ಖಚಿತ.

5 thoughts on “ಕುಂದಾಪುರಕ್ಕೆ ಕೊಡ್ಗಿ, ಉಡುಪಿಗೆ ಯಶ್ಪಾಲ್, ಕಾಪು ಗುರ್ಮೆ- ಲಾಲಾಜಿ, ಭಟ್‌ಗೆ ಕೋಕ್?

  1. Suesh ji will be getting seat for sure but presentation of field has to be impressive keep the best men capable of work…

  2. Jayaprakash Hegde for kundapur. Then only we can save seat in kundapur or else simply we might loose that seat to congress. Hope highcommend get this point

Leave a Reply

Your email address will not be published. Required fields are marked *

error: Content is protected !!