ಜೆಸಿಐ ಬ್ರಹ್ಮಾವರ: ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವ
ಬ್ರಹ್ಮಾವರ: ಜೆಸಿಐ ಬಹ್ಮಾವರ ಸಂಸ್ಥೆಯ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಘನ ಮತ್ತು ದ್ರವ ಸಂಪನ್ಮೂಲ ಘಟಕದಲ್ಲಿ ಸೇವೆಗೈಯುತ್ತಿರುವ 6 ಜನ ಸ್ವಚ್ಚತಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ನಾಗವೇಣಿ ಪಂಡರಿನಾಥ್, ಉಪಾದ್ಯಕ್ಷ ದೇವಾನಂದ್ ನಾಯಕ್ ಹಂದಾಡಿ, ಪಂಚಾಯತ್ ಉಪಾದ್ಯಕ್ಷೆ ಶೋಭಾ ಪೂಜಾರಿ, ವಾರಂಬಳ್ಳಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಫರ್ಜಾನ ಎಂ, ಹಂದಾಡಿ ಗ್ರಾಮ ಪಂಚಾಯ್ತ ಮಾಜಿ ಅಧ್ಯಕ್ಷ ಉದಯ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮತ್ತು ಎಸ್ ನಾರಾಯಣ, ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಉಮಾ ಬಾಯಿ, ಸಂಧ್ಯಾ, ಎಸ್ ಆರ್ ಎಲ್ ಎಂ ಮುಖ್ಯ ಕಾರ್ಯನಿವಾಹಣಾಧಿಕಾರಿ ವಿಜಯಲಕ್ಷ್ಮೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೆಸಿಐ ಬ್ರಹ್ಮಾವರ ಸೇವಾಮೆ ಸಂಸ್ಥೆಯ ಅಧ್ಯಕ್ಷರಾಗಿರುವ ಕೃಷ್ಣಮೂರ್ತಿ ಹೈಕಾಡಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲರನ್ನು ಸ್ವಾಗತಿಸಿದರು. ವಾರಂಬಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಮಾತನಾಡಿ ಕಾರ್ಯಕ್ರಮದಲ್ಲಿ ಸ್ವಚ್ಚತಾ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸಿರುವುದು ಉತ್ತಮ ಕೆಲಸವಾಗಿದ್ದು ನಿರಂತರವಾಗಿ ಪ್ರೋತ್ಸಾಹವಿರಲಿ ಎಂದರು. ಜೆಸಿಐ ವಲಯ 15ರ ಪೂರ್ವ ನಿರರ್ದೆಶಕರಾಗಿರುವ ಸುನಿಲ್ ,ಬ್ರಹ್ಮಾವರ ಸೇವಾಮೆ ಖಜಾಂಜಿ ಜ್ಯೋತಿ ರಾವ್, ಶಶಿಕಾಂತ್ ಜೆಜೆಸಿ ಅಧ್ಯಕ್ಷರಾದ ವೈಷ್ಣವಿ ಹೈಕಾಡಿ, ಕಾರ್ಯದರ್ಶಿ ಕಾವ್ಯ ಹೆಬ್ಬಾರ್, ನಿಶ್ಮೀತಾ ಅಮಿತ, ಸಹನಾ ಜೆ ಇವರು ಉಪಸ್ಥಿತರಿದ್ದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಘ ಉಡುಪಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಎಸ್ ಆರ್ ಎಲ್ ಎಂ ನ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಯೋಜನಾಧಿಕಾರಿಗಳು ರೋಷನ್ ಡಿ ಅಲ್ಮೇಡಾ ಎಲ್ಲರಿನ್ನು ವಂದಿಸಿದರು. ಸುಮತಿ, ಶಾರದಾ, ಲೀಲಾ, ಕಮಲಿ,ಶ್ರೀಮತಿ ವನಜಾ, ರಾಧಾ ಇವರನ್ನು ಗೌರವಿತವಾಗಿ ಸನ್ಮಾನಿಸಲಾಯಿತು.