ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್: ದೈವ ನರ್ತಕ ಕುಟುಂಬಕ್ಕೆ 1ಲಕ್ಷ ರೂ ಪರಿಹಾರ
ಮಂಗಳೂರು: ಏ.2 ರಂದು ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ನೇಮ ನಡೆಯುತ್ತಿದ್ದ ಸಂದರ್ಭದಲ್ಲಿ ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ರೂ 1 ಲಕ್ಷದ ಆರ್ಥಿಕ ನೆರವು ಘೋಷಣೆ ಮಾಡಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ದೈವಾರಾಧನೆ ಕುರಿತು ಅಪಾರ ಜ್ಞಾನ ಹೊಂದಿದ್ದ ಕಾಂತು ಅಜಿಲರು ಹಲವರಿಗೆ ಸಂಶೋಧನೆ ಕುರಿತು ಮಾಹಿತಿ ನೀಡುತ್ತಿದ್ದರು.
ಎಡಮಂಗಲದ ಪ್ರಮುಖ ದೈವಸ್ಥಾನದಲ್ಲಿ ದೈವನರ್ತಕರಾಗಿ ಸೇವೆ ಮಾಡುತ್ತಿದ್ದರು. ಅವರು 45 ವರ್ಷಗಳಿಂದ ದೈವ ನರ್ತಕರಾಗಿ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ ಗ್ರಾಮದೈವಗಳ ಪರಿಚಾರಕಾಗಿ ಸೇವೆ ಸಲ್ಲಿಸುತ್ತಿದ್ದರು.