ನಾಟ್ಯಶಾಸ್ತ್ರದ 108 ಕರಣಗಳ ಪ್ರದರ್ಶನದ ಮೂಲಕ 8ನೇ ವಿಶ್ವ ದಾಖಲೆಗೆ ತನುಶ್ರೀ ಸಜ್ಜು
ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನಾಟ್ಯಶಾಸ್ತ್ರದ 108 ಕರಣಗಳ ಭಂಗಿಗಳನ್ನು ನಾಲ್ಕು ನಿಮಿಷದಲ್ಲಿ ಪ್ರದರ್ಶಿಸುವ ಮೂಲಕ 8ನೇ ವಿಶ್ವದಾಖಲೆಗೆ ಸಜ್ಜಾಗಿದ್ದಾರೆ.
ಇದೇ ಬರುವ ಎ.4ರಂದು ಸಂಜೆ 4ಗಂಟೆಗೆ ಬನ್ನಂಜೆ ಶ್ರೀನಾರಾಯಣಗುರು ಆಡಿಟೋರಿಯಂನಲ್ಲಿ ತನುಶ್ರೀ ಅವರು ಈ ವಿಶ್ವದಾಖಲೆಗೆ ಪ್ರಯತ್ನ ನಡೆಸಲಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭರತ ನಾಟ್ಯಗುರು ರಾಮಕೃಷ್ಣ ಕೊಡಂಚ ಅವರು, ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ ನಾಟ್ಯಶಾಸ್ತ್ರದ 108 ಕರಣಗಳಾಗಿವೆ. ಪ್ರತೀ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಇದು ಕೇವಲ ಭಂಗಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಯೋಗ ಸಾಧಕಿ ತನುಶ್ರೀ ಪಿತ್ರೋಡಿ, ತನುಶ್ರೀ ತಂದೆ ಉದಯ ಕುಮಾರ್, ಸುರಭಿ ರತನ್, ವಿಜಯ ಕೋಟ್ಯಾನ್ ಇದ್ದರು.