ಕಾಪು: ಅಪಘಾತದಿಂದ ಚಿಕಿತ್ಸೆಗೆ ಸ್ಪಂದಿಸದೆ ಯುವಕ ಮೃತ್ಯು, ಪತ್ತೆಗೆ ಮನವಿ
ಉಡುಪಿ, ಸೆ.12; ಅಪರಿಚಿತ ವ್ಯಕ್ತಿಯೊರ್ವರು ಅಪಘಾತದಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಶವವನ್ನು ಅಜ್ಛರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನಿಗೆ ಸುಮಾರು 30 ವರ್ಷ ಅಂದಾಜಿಸಲಾಗಿದೆ.
ಮೃತ ಯುವಕನ ವಿವರಗಳು ಲಭ್ಯವಾಗಿಲ್ಲ, ಮೃತ ವ್ಯಕ್ತಿಯ ಉಡುಪಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದಾಗಿ ಹರೀಶ್ ಎಂಬ ಹೆಸರಿನಿಂದ ಕರೆಯುತ್ತಿದ್ದರು ರೆಂದು ಮಾಹಿತಿ ಇದ್ದು, ವಾರಸುದಾರರ ಬಗ್ಗೆ ಮಾಹಿತಿ ಇರುವದಿಲ್ಲ, ಸದ್ರಿ ವ್ಯಕ್ತಿಯ ವಾರಸುದಾರರು ಸಂಬಂಧಿಕರು ಕಾಪು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕಾಪು ಪೊಲೀಸರು ವಿನಂತಿಸಿದ್ದಾರೆ.
ಸಂಪರ್ಕಿಸುವ ದೂರವಾಣಿ…0820 2551033 ಕಾಪು ಠಾಣೆ, 9480805449 ಪಿಎಸ್ಐ ಕಾಪು 0820 2526444 ಕಂಟ್ರೋಲ್ ರೂಂ ಉಡುಪಿ ಮೇಲ್ಕಂಡ ನಂಬರಗಳಿಗೆ ಸಂಪರ್ಕಿಸಲು ಕೋರಲಾಗಿದೆ.