ಎ.1ರಿಂದ ಯುಪಿಐ ವಹಿವಾಟ್ ಗೆ 1.1 ಶೇ. ವಿನಿಮಯ ಶುಲ್ಕ

ನವದೆಹಲಿ ಮಾ.30: ದೇಶದಲ್ಲಿ ಎ.1 ರಿಂದ 2000 ಕ್ಕಿಂತ ಅಧಿಕ ಮೊತ್ತದ ಯುಪಿಐ ವಹಿವಾಟುಗಳಿಗೆ 1.1 ಶೇ. ದಷ್ಟು ಇಂಟರ್ನೆಟ್ ಶುಲ್ಕುವನ್ನು ವಿಧಿಸಲಾಗುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ.

ಈ ಹೊಸ ಶುಲ್ಕ ವಿನಿಮಯ ಎ.1 ರಿಂದ ಜಾರಿಗೆ ಬರಲಿದ್ದು, ವಿವಿಧ ವರ್ಗದ ವ್ಯಾಪಾರಿಗಳಿಗೆ ಭಿನ್ನವಾಗಿರುತ್ತದೆ. ಇವು ಶೇ. 0.5ರಿಂದ ಶೇ. 1.1 ರವರೆಗೆ ಇರಲಿದೆ. ನಿರ್ದಿಷ್ಟ ವರ್ಗಗಳಲ್ಲಿ ಮಿತಿ ಸಹ ಅನ್ವಯಿಸುತ್ತದೆ ಎಂದು ಎನ್‌ಪಿಸಿಐ ಹೇಳಿದೆ.

ಹಾಗೂ ಈ ಶುಲ್ಕವು ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ, ಸಾಮಾನ್ಯ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಅದೇ ರೀತಿ ಜನರು ವ್ಯಾಪಾರಿಗಳಿಗೆ ಪಾವತಿಸುವ ಹಣಕ್ಕೂ ಯಾವುದೇ ಶುಲ್ಕ ಇರುವುದಿಲ್ಲ ಎಂದು ಎನ್.ಪಿ.ಸಿ.ಐ ಸ್ಪಷ್ಟಪಡಿಸಿದೆ.

ಟೆಲಿಕಾಂ, ಶಿಕ್ಷಣ ಮತ್ತು ಯುಟಿಲಿಟೀಸ್/ಪೋಸ್ಟ್ ಆಫೀಸ್‌ಗಳಿಗೆ ಇಂಟರ್‌ಚೇಂಜ್ ಶುಲ್ಕವು ಶೇ. 0.7 ಆಗಿದ್ದರೆ, ಸೂಪರ್‌ ಮಾರ್ಕೆಟ್‌ಗಳಿಗೆ ಶುಲ್ಕವು ವಹಿವಾಟಿನ ಮೌಲ್ಯದ ಶೇ. 0.9 ಆಗಿದೆ. ವಿಮೆ, ಸರ್ಕಾರ, ಮ್ಯೂಚುವಲ್ ಫಂಡ್‌ಗಳು ಮತ್ತು ರೈಲ್ವೇಗಳಿಗೆ ಶೇ.1 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇಂಧನಕ್ಕಾಗಿ ಶೇ. 0.5 ಮತ್ತು ಕೃಷಿಗೆ ಶೇ. 0.7ರಷ್ಟು ಶುಲ್ಕ ವಿಧಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!