ಕುಂದಾಪುರ: ಸಮೃದ್ಧಿ ವಿರುದ್ದ ಮತ್ತೆ ಲಕ್ಷಾಂತರ ರೂ. ವಂಚನೆ ದೂರು ದಾಖಲು
ಕುಂದಾಪುರ : (ಉಡುಪಿ ಟೈಮ್ಸ್ ವರದಿ) ಜಿಲ್ಲೆ ಜನರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಸಾವಿರಾರು ಜನರಿಗೆ ಟೋಪಿ ಹಾಕಿದ ಸಂಸ್ಥೆಯ ವಿರುದ್ದ ಮತ್ತೊಂದು ದೂರು ದಾಖಲಾಗಿದೆ.
ಕುಂದಾಪುರ ದೇವಲ್ಕುಂದ ಕಾರ್ಮಿನ್ ಲೂವಿಸ್ (38) ಅವರು ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಕಾಂಚನ ಕಾಂಪ್ಲೆಕ್ಸ್ ನಲ್ಲಿ ಸಮೃದ್ಧಿ ಜೀವನ್ ಮಲ್ಟಿ ಸ್ಟೇಟ್-ಮಲ್ಟಿ ಪರ್ಪಸ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಕಡಿಮೆ ವರ್ಷದಲ್ಲಿ ಹಣ ದ್ವಿಗುಣಗೊಳ್ಳುವ ಆಸೆಯಲ್ಲಿ ಸೊಸೈಟಿಗೆ 3,81,000/- ರೂ ವಿನಿಯೋಗಿಸಿದ್ದರು.
ಮಾತ್ರವಲ್ಲದೆ ಅವರು ಅದರ ಏಜೆಂಟ್ ಆಗಿ ಸೆರ್ಪಡೆಗೊಂಡು ಕಮೀಷನ್ ಆಸೆಗಾಗಿ ಹಲವಾರು ಜನರಿಂದ ಲಕ್ಷಾಂತರ ರೂ. ಸಂಗ್ರಹಿಸಿ ನೀಡಿದ್ದರು, ಸೊಸೈಟಿಯ ಕಾನೂನಿನ ಅಡಿಯಲ್ಲಿ ರಿಜಿಸ್ಟ್ರೇಶನ್ ಆಗಿದೆ ಎಂದು ನಂಬಿ ಹಣವನ್ನು ಹೂಡಿಕೆ ಮಾಡಿದ್ದು, ಬಹಳ ಬೇಗ ದ್ವಿಗುಣವಾಗುವುದಾಗಿ ನಂಬಿ ಲೂವಿಸ್ ಮತ್ತು ಇತರ ಗ್ರಾಹಕರಿಂದ ಒಟ್ಟು 68,24,900/- ಹಣವನ್ನು ತೊಡಗಿಸಿದ್ದರು.
ಈಗ ಅವರು ಹೂಡಿರುವ ಹಣವನ್ನು ಪಡೆಯಲು ಹೋದಾಗ ಕಛೇರಿಗೆ ಬೀಗ ಹಾಕಿದ್ದರಿಂದ ಸಂಸ್ಥೆಯ ಮಹೇಶ್ ಕಿಸಾನ್ ಮೊಂತೆವಾರ್ , ಪ್ರಸಾದ್ , ವೈಶಾಲಿ ಮೊಂತೆರೋ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ