ಉಡುಪಿ ಪೊಲೀಸರಿಂದ “ಆಪರೇಷನ್ ಸೂರ್ಯಾಸ್ತ”- 258 ಪ್ರಕರಣ,1.30 ಲಕ್ಷ ದಂಡ ವಸೂಲು

ಉಡುಪಿ: ಜಿಲ್ಲಾ ಪೊಲೀಸ್‌ ವತಿಯಿಂದ ಆಪರೇಷನ್ ಸೂರ್ಯಾಸ್ತ (Operation Sunset) ವಿಶೇಷ ಕಾರ್ಯಚರಣೆಯಲ್ಲಿ 258 ಪ್ರಕರಣ ದಾಖಲಿಸಿ, ರೂ.1.30 ಲಕ್ಷ ದಂಡ ವಸೂಲಿ ಮಾಡಿ, ಇಪ್ಪತ್ತು ವಾಹನ ವಶಪಡಿಸಿಕೊಳ್ಳಲಾಗಿದೆ.

ಈ ವಿಶೇಷ ಕಾರ್ಯಚರಣೆಯಲ್ಲಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದು, ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ಶನಿವಾರ ರಾತ್ರಿ ನಡೆಸಲಾಗಿತ್ತು. 

ಸಾರ್ವಜನಿಕ ತೊಂದರೆ ಕೊಡುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಪ್ರಕರಣ ಗಳನ್ನು ದಾಖಲಿಸಲಾಯಿತು. ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು ಅಲ್ಲದೇ ಅದರ ಜೊತೆಯಲ್ಲಿ ಇ-ಸಿಗರೇಟ್ ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲು ಸಹ ದಾಳಿ ಮಾಡಲಾಗಿದೆ.

ಈ ವಿಶೇಷ ಕಾರ್ಯಚರಣೆಯಿಂದಾಗಿ ಗಾಂಜಾ ಹಾಗೂ MIMA ಅನ್ನು ಸಣ್ಣ ಪ್ರಮಾಣದಲ್ಲಿ ಹೊಂದಿದ 03 ಮಂದಿಯನ್ನು ಬಂಧಿಸಲಾಯಿತು. ಅಲ್ಲದೇ ವಾಹನ ತಪಾಸಣೆ ವೇಳೆ 45 ಲೀಟರ್ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಯಿತು.

ಫಿಂಗರ್ ಪ್ರಿಂಟ್ ಸ್ಟಾರ್ ಮುಖಾಂತರ ಹಳೆಯ ಕಳ್ಳತನ ಹಾಗೂ ಅದರ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾದ 60 ಮಂದಿಯನ್ನು ಪರಿಶೀಲಿಸಲಾಗಿತ್ತು. 

ಸರಿಯಾಗಿ ದಾಖಲೆಗಳಿಲ್ಲದ, ನಕಲಿ ನಂಬರ್ ಪ್ಲೇಟ್, ನಂಬರ್ ಪ್ಲೇಟ್ ಇಲ್ಲದ, ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡುತ್ತಿರುವ ವಾಹನ ಚಾಲಕರುಗಳನ್ನು ತಪಾಸಣೆ ನಡೆಸಿದ್ದು, ಮದ್ಯ ಸೇವಿಸಿ ವಾಹನ ಚಲಾವಣೆ ಮಾಡಿದ ಬಗ್ಗೆ 32 ಪ್ರಕರಣಗಳನ್ನು ದಾಖಲಿಸಲಾಯಿತು. 

ಅಲ್ಲದೇ ಕ್ರಮಬದ್ದ ನಂಬ‌ ಪ್ಲೇಟ್ ಹೊಂದಿರದ ನಕಲಿ ನಂಬರ್ ಪ್ಲೇಟ್ ಹೊಂದಿರುವಂತಹ 20 ವಾಹನಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಒಟ್ಟು 258 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು ರೂ. 130,000/- ದಂಡದ ಮೊತ್ತವನ್ನು ಸಂಗ್ರಹಿಸಿದ್ದಾರೆ. 

ಅದೇ ರೀತಿ 44 ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಹಾಗೂ ಅದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಮಾರಾಟ ಮಾಡಿದ ಬಗ್ಗೆ 14 ಕೋಟ್ಪಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಯಿತು. 44 ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುತ್ತಿದ್ದ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಯಿತು.

ನಾವು ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ 65 ಮಂದಿ ರೌಡಿ ಶೀಟರ್‌ಗಳನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಿ, ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಯಿತು.

ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರ ಬಗ್ಗೆ ತೀರ್ವ ನಿಗಾ ವಹಿಸಿ ಕಾನೂನಿನ ಪರಿಪಾಲನೆ ಮಾಡುವ ಸಲುವಾಗಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *

error: Content is protected !!