ಶ್ರೀಕೃಷ್ಣ ಮಠಕ್ಕೆ ಜಾಗ ನೀಡಿದ್ದು ಅಳುಪ ರಾಜ, ರಾಮ ಭೋಜರಾಜ ಇತಿಹಾಸ ಪುರುಷನೇ ಇರಲಿಲ್ಲ- ಶ್ರೀವಿಶ್ವ ಸಂತೋಷ ಭಾರತಿ ಶ್ರೀ
ಉಡುಪಿ ಮಾ.16(ಉಡುಪಿ ಟೈಮ್ಸ್ ವರದಿ): ಶ್ರೀಕೃಷ್ಣ ಮಠಕ್ಕೆ ಜಾಗ ನೀಡಿದ್ದು ಅಳುಪ ರಾಜರು ಈ ಬಗ್ಗೆ ದಾಖಲೆಗಳೂ ಇವೆ ಎಂದು ಶ್ರೀಬಾರ್ಕೂರು ಮಹಾಸಂಸ್ಥಾನ ವಿಶ್ವಸ್ಥ ಮಂಡಳಿಯ ಶ್ರೀವಿಶ್ವ ಸಂತೋಷ ಭಾರತಿ ಶ್ರೀಪಾದರು ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಜಾಗ ನೀಡಿದ್ದು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಪೇಜಾವರ ಶ್ರೀಗಳು ಮುಸ್ಲಿಮರಿಂದಲೂ ಬಹಳಷ್ಟು ದಾನಗಳು ಬಂದಿದೆ ಎಂದು ಹೇಳಿದ್ದಾರೆ. ಆ ಆಧಾರದಲ್ಲಿ ಮಿಥುನ್ ರೈ ಅವರು ಹೇಳಿಕೆ ನೀಡಿದ್ದಾರೆ. ಆದರೆ ಅವರನ್ನು ಓರ್ವ ಇತಿಹಾಸ ತಜ್ಞ ಹೇಳಿಕೆ ನೀಡಿರುವ ರೀತಿ ತೇಜೋವಧೆ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೂ ಮಿಥುನ್ ರೈ ಅವರು ಇತಿಹಾಸ ತಜ್ಞನೂ ಅಲ್ಲ ಪ್ರಾಚ್ಯವಾಸ್ತು ತಜ್ಞ ನೂ ಅಲ್ಲ. ಓರ್ವ ರಾಜಕೀಯ ವ್ಯಕ್ತಿಯಾಗಿ ಮುಸ್ಲಿಮರಿಂದಲೂ ನಮಗೆ ದಾನ ಬಂದಿದೆ. ನಮ್ಮಿಂದಲೂ ಅವರಿಗೆ ದಾನಗಳು ಹೋಗಿವೆ ಸೌಹಾರ್ದತೆಯಿಂದ ಇರುವ ಎಂಬ ಉದ್ದೇಶದಿಂದ ಹೇಳಿದ್ದಾರೆ ಎಂದು ಅವರೇ ಹೇಳಿದ್ದಾರೆ. ಇದರ ಇತಿಹಾಸದ ಬಗ್ಗೆ ಮಾತನಾಡುವವರು ಮಧ್ವಾಚಾರ್ಯರು ಇದ್ದಿದೂ ಯಾವಾಗ ಎಂದು ಅರ್ಥ ಮಾಡಿಕೊಳ್ಳಬೇಕು. ಅವರು 1238 ರಲ್ಲಿ ಹುಟ್ಟಿದ್ದು, ಆನಂತರ 79 ವರ್ಷ ಬದುಕಿದ್ದಾರೆ. 1290 ರ ಅವಧಿಯಲ್ಲಿ ಜಾಗ ನೀಡಿದ್ದು ಆಗ ಇದ್ದಿದ್ದು ಬಾರ್ಕೂರಿನ ಅರಸರು ಬಿಟ್ಟರೆ ಇನ್ಯಾರೂ ಅರಸರು ಇರಲಿಲ್ಲ. ಹಾಗಾಗಿ ಅಳುಪರೇ ಶ್ರೀ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಎಂದರು.
ಇನ್ನು ಈ ನಡುವೆ ರಾಮ ಭೋಜರಾಜ ಎಂಬ ಹೆಸರು ಕೇಳಿ ಬಂದಿದ್ದು. ಆ ಹೆಸರಿನ ಐತಿಹಾಸಿಕ ಪುರುಷನೇ ಈ ತುಳುನಾಡಿನಲ್ಲಿ ಇರಲಿಲ್ಲ. ರಾಮಭೋಜರಾಜ ಎಂಬವರು ಜಾಗ ನೀಡಿದ್ದು ಎಂದು ಶಾಸಕರೊಬ್ಬರು ಹೇಳಿದ್ದಾರೆ. ಅವರೂ ಯಾರೋ ಹೇಳಿದ್ದನ್ನು ಕೇಳಿ ಹೇಳಿದ್ದಾರೆ. ಅವರೂ ಇತಿಹಾಸ ತಜ್ಞರಲ್ಲ. ಈ ಬಗ್ಗೆ ಎಲ್ಲೂ ಆಧಾರಗಳು ಸಿಗೋದಿಲ್ಲ. ಯಾರೇ ಈ ಬಗ್ಗೆ ಹೇಳಿಕೆ ನೀಡಿದರೂ ಯಾರೂ ಇತಿಹಾಸ ತಜ್ಞರಲ್ಲ. 1667 ರ ವರೆಗೆ ಅಳುಪರ ಆಲ್ವಿಕೆಯಲ್ಲೇ ಈ ತುಳುನಾಡು ಇತ್ತು ಎಂದು ಇತಿಹಾಸ ಹೇಳುತ್ತದೆ. ಆದ್ದರಿಂದ ಈ ಜಾಗ ಅಳುಪರೇ ನೀಡಿದ್ದು ಎಂದು ಇಲ್ಲಿಗೆ ಈ ವಿಚಾರವನ್ನು ನಿಲ್ಲಿಸಿ ಯಾವುದೇ ವಿವಾದ ಮುಂದುವರೆಸದಿರುವುದು ಉತ್ತಮ ಎಂದು ಹೇಳಿದರು.
This fraud so called Santhosh bharthi swami is a shame to Bunt community which he claims to belongs to.
His knowledge of history of this land …..the original canara district is as much as the FROGs knowledge of the WELL.
This mans bussiness of fake GODMAN BABA INDUSTRY…..is to fool the public and loot money from IGNORANT and innocent people.