ಕಾಪು: ಭೀಕರ ಅಪಘಾತ ಯುವತಿ ಮೃತ್ಯು, ನಾಲ್ವರಿಗೆ ಗಾಯ
ಕಾಪು: (ಉಡುಪಿ ಟೈಮ್ಸ್ ವರದಿ) ರಾಷ್ಟ್ರೀಯ ಹೆದ್ದಾರಿ 66ರ ಕಾಪುವಿನಲ್ಲಿ ಕಾರು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತ ಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೃತ ದುರ್ದೈವಿ ಮಂಗಳೂರು ಮೂಲದ ಅಶ್ರಿತಾ ಸಲ್ಡಾನ್ಹಾ(24) ಎಂದು ತಿಳಿದುಬಂದಿದೆ . ಕಾರು ಚಾಲಕ ನಿಹಾಲ್ ದಿನೇಶ್ ಶೆಟ್ಟಿ(24) ಎಂಬತನ ಸ್ಥಿತಿ ಗಂಭೀರವಾಗಿದೆoದು ಕಾಪು ಪೊಲೀಸರು ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ನ ಮೇಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆನ್ನಲಾಗಿದೆ. ಮಂಗಳೂರಿನಿಂದ ಉಡುಪಿಯತ್ತ ಕಾರು ಸಾಗುತ್ತಿತ್ತು. ಈ ವೇಳೆ ಹಳೆ ಮೆಸ್ಕಾಂ ಕಚೇರಿಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ನ ಮೇಲಿನ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ನೆಲಕ್ಕುರುಳಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.