ಉಡುಪಿ: ಹೋಳಿ ಸಂಭ್ರಮದಲ್ಲಿದ್ದ ರಿಕ್ಷಾ ಚಾಲಕ ಹೃದಯಾಘಾತದಿಂದ ನಿಧನ
ಉಡುಪಿ: ರಥಬೀದಿ ನಿಲ್ದಾಣದ ಆಟೋ ಚಾಲಕ, ದೊಡ್ಡಣಗುಡ್ಡೆ ನಿವಾಸಿ ಹರೀಶ್ ನಾಯ್ಕ್ (40) ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾದರು.
ಮರಾಠಿ ಸಮುದಾಯದ ಹೋಳಿ ಸಂಭ್ರಮ ಕೊನೆಯ ದಿನವಾದ ಶನಿವಾರ ಗೊಂದುಲು ಪೂಜೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟೋತ್ತಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.