ಉಡುಪಿ: “ಗೀತಾಂಜಲಿ ಸಿಲ್ಕ್ಸ್” ಮಾನ್ಸೂನ್ ಮೆಗಾ ಆಫರ್ ಸೆ. 30ಕ್ಕೆ ಮುಕ್ತಾಯ
ಉಡುಪಿ : (ಉಡುಪಿ ಟೈಮ್ಸ್ ವರದಿ) ಕರಾವಳಿ ಕರ್ನಾಟಕದ ಅತಿ ದೊಡ್ಡ ಬಟ್ಟೆ ಮಳಿಗೆಯಾಗಿರುವ ಉಡುಪಿಯ “ಗೀತಾಂಜಲಿ ಸಿಲ್ಕ್ಸ್” ನಲ್ಲಿ ‘ಮಾನ್ಸೂನ್ ಮೆಗಾ ಸೇಲ್’ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನಲೆಯಲ್ಲಿ ಮತ್ತು ಮುಂಬರುವ ಹಬ್ಬ ಹಾಗೂ ಶುಭ ಸಮಾರಂಭಗಳಿಗಾಗಿ, ಸೆಪ್ಟೆಂಬರ್ 30 ರವರೆಗೆ ದರಕಡಿತ ಮಾರಾಟವನ್ನು ಮುಂದುವರಿಸಿರುವುದಾಗಿ ಗೀತಾಂಜಲಿ ಸಿಲ್ಕ್ಸ್ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ಮಾನ್ಸೂನ್ ಮೆಗಾ ದರ ಕಡಿತ ಮಾರಾಟ ಮುಕ್ತಾಯಗೊಳ್ಳುವ ಈ ದಿನಗಳಲ್ಲಿ ಗ್ರಾಹಕರಿಗೆ ಸದುಪಯೋಗವಾಗುವಂತೆ ಸಂಸ್ಥೆಯು ಎಲ್ಲ ಸಪ್ಲಾಯರ್ಸ್ ಹಾಗೂ ಮ್ಯಾನ್ಯುಫ್ಯಾಕ್ಚರ್ಸ್ ಅನ್ನು ಒಂದುಗೂಡಿಸಿ, ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲ ರೀತಿಯ ಉಡುಗೆ ತೊಡುಗೆಗಳ ಮೇಲೆ ವಿಶೇಷ ರಿಯಾಯಿತಿಯನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ಗೀತಾಂಜಲಿ ಸಿಲ್ಕ್ಸ್ ನ ಎಲ್ಲಾ ಮಹಡಿಗಳು ಅತಿ ವಿಶಾಲವಾಗಿರುವುದರಿಂದ ಗ್ರಾಹಕರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದು ಹಾಗೂ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಲಾಗುತ್ತಿದೆ. ಇಲ್ಲಿ ಇಡೀ ಕುಟುಂಬಕ್ಕೆ ಬೇಕಾದ ವೈವಿಧ್ಯಮಯ ಉಡುಪುಗಳು ಗ್ರಾಹಕರ ಮನವೊಪ್ಪುವಂತಹ ಸಂಗ್ರಹಗಳು ಲಭ್ಯವಿದ್ದು, ಗ್ರಾಹಕರ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ಗೀತಾಂಜಲಿ ಸಿಲ್ಕ್ಸ್ ನ ಆಡಳಿತ ಮಂಡಳಿ ತಿಳಿಸಿದೆ.