ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ- ಪವಾಡ ಸದೃಶವಾಗಿ ಬದುಕುಳಿದ 12 ವರ್ಷದ ಬಾಲಕಿ

ಮಂಗಳೂರು: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ್‌ಗುತ್ತಿನಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಯಾಲ್ ಬೈಲ್ ಸಮೀಪ ನಡೆದಿದ್ದು, ಈ ಘಟನೆಯಲ್ಲಿ ಮಹಿಳೆ ಹಾಗೂ 4 ವರ್ಷದ ಬಾಲಕಿ ಸಾವನಪ್ಪಿದ್ದು, ಮತ್ತೊರ್ವ ಬಾಲಕಿ ಪವಾಡ ಸದೃಶ್ಯವಾಗಿ ಪಾರಾದ ಘಟನೆ ನಡೆದಿದೆ.

ಮೃತರನ್ನು 33 ವರ್ಷದ ಮಹಿಳೆ ವಿಜಯ, 4 ವರ್ಷದ ಶೋಭಿತಾ ಎಂದು ಗುರುತಿಸಲಾಗಿದ್ದು, 12 ವರ್ಷದ ಯಜ್ಞಾ ಪವಾಡ ಸಧೃಶ್ಯರಾಗಿ ಬದುಕಿ ಉಳಿದಿದ್ದಾಳೆ. ಮೃತ ವಿಜಯಳ ಮೊದಲ ಪತಿ ಸುರೇಂದ್ರ 6 ವರ್ಷಗಳ ಹಿಂದೆ ಮೃತಪಟ್ಟಿದ್ದು, ಬಳಿಕ ವಿಜಯ 2ನೇ ಮದುವೆಯಾಗಿದ್ದರು, ಆದ್ರೆ 20 ದಿನಗಳ ಹಿಂದೆ 2 ನೇ ಪತಿ ಉಮೇಶ್ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದರಿಂದ ತೀವ್ರವಾಗಿ ನೊಂದಿದ್ದ ವಿಜಯ ಮಕ್ಕಳೊಂದಿಗೆ ಆತ್ಮಹತ್ಯೆಗೆ ಚಿಂತನೆ ನಡೆಸಿ ತನ್ನ ಇಬ್ಬರು ಮಕ್ಕಳಿಗೂ ಕುಣಿಕೆ ಹಾಕಿ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ. ಆದರೆ ಅದೃಷ್ಟವಶತ್ 12 ವರ್ಷದ ಯಜ್ಞಾ ಕಾಲ ಬುಡದಲ್ಲಿದ್ದ ಟಿಪಾಯಿಂದ ಬದುಕಿ ಉಳಿದು ಸಹಾಯಕ್ಕೆ ಕೂಗಿದ್ದಾಳೆ. ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆ ಇದ್ದ ಹೋಟೆಲ್ ಸಿಬಂದಿಗಳು ಮಗುವಿನ ಚೀರಾಟ ಕೇಳಿ ಕೆಳಗೆ ಓಡಿ ಬಂದು ನೋಡಿದಾಗ ತಾಯಿ ವಿಜಯ ಮತ್ತು 4 ವರ್ಷದ ಮಗುವಿನ ಪ್ರಾಣ ಅದಾಗಲೇ ಹಾರಿ ಹೋಗಿತ್ತು. ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!