ಕುಸಿಯುತ್ತಲೇ ಇದೇ ಅದಾನಿ ಸಾಮ್ರಾಜ್ಯ! 9.96 ಲಕ್ಷ ಕೋಟಿಯ ಸಂಪತ್ತು ಈಗ ರೂ.2.89 ಲಕ್ಷ ಕೋಟಿ!
ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 34ನೇ ಸ್ಥಾನಕ್ಕೆ ಕುಸಿದಿದ್ದು, ಹೂಡಿಕೆದಾರರು ಕೋಟ್ಯಾಂತರ ರೂ. ಕಳೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅವರು 30ನೇ ಸ್ಥಾನದಲ್ಲಿದ್ದರು. ಆದರೆ, ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ವರದಿ ಪರಿಣಾಮವಾಗಿ ಅದಾನಿ ಕಂಪನಿಯ ಶೇರುಗಳ ಮೌಲ್ಯ ಕುಸಿತ ಮುಂದುವರಿಯುತ್ತಲೇ ಹೋಗುತ್ತಿದ್ದೆ.
ವರದಿ ಬಿಡುಗಡೆಗೂ ಮೊದಲು ಅವರ ಸಂಪತ್ತಿನ ಮೌಲ್ಯವು ₹9.96 ಲಕ್ಷ ಕೋಟಿಯಷ್ಟು ಇತ್ತು. ಆದರೆ ಇದೀಗ ಅವರ ಸಂಪತ್ತು ಮೌಲ್ಯ ₹2.89 ಲಕ್ಷ ಕೋಟಿಗೆ ಇಳಿಕೆ ಆಗಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 34ನೇ ಸ್ಥಾನಕ್ಕೆ ಕುಸಿಯುವಂತಾಗಿದೆ.
ಕಳೆದ ವರ್ಷ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಅದಾನಿ ಅವರು ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮೊದಲ ಮತ್ತು ವಿಶ್ವದ ಮೂರನೇ ಸಿರಿವಂತ ಉದ್ಯಮಿ ಸ್ಥಾನಕ್ಕೆ ಏರಿದ್ದರು. ಮುಕೇಶ್ ಅಂಬಾನಿ ಅವರು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಸದ್ಯ 8ನೇ ಸ್ಥಾನದಲ್ಲಿ ಇದ್ದಾರೆ. ಅವರ ಒಟ್ಟು ಸಂಪತ್ತು ಮೌಲ್ಯ ₹ 6.82 ಲಕ್ಷ ಕೋಟಿ ಇದೆ.