ಉಡುಪಿ: ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ- ದಂಡ ವಸೂಲಿ
ಉಡುಪಿ: ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಟಾನಗೊಳಿಸುವ
ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಬುಧವಾರ ಉಡುಪಿ ತಾಲೂಕಿನ ಮಣಿಪಾಲ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4, 6ಎ ಮತ್ತು 6ಬಿ ಅಡಿಯಲ್ಲಿ 34 ಪ್ರಕರಣ ದಾಖಲಿಸಿ 4600 ರೂ. ದಂಡ ವಸೂಲಿ ಮಾಡಿ,
ಸೆಕ್ಷನ್ 4, 6ಎ ಮತ್ತು 6 ಬಿ ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ದೇವಪ್ಪ ಪಟಗಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬೈರಿ, ಎನ್.ಸಿ.ಡಿ ಜಿಲ್ಲಾ ಸಂಯೋಜಕ ಡಾ. ಅಫನ್, ರಾಷ್ಟಿಯ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ
ಸಲಹೆಗಾರ್ತಿ ಮಂಜುಳಾ, ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು, ಮಣಿಪಾಲ ಪೊಲೀಸ್ ಠಾಣೆಯ ಆರಕ್ಷಕ ಯಲ್ಲಾಲಿಂಗ ಮತ್ತು ಥಾಮ್ಸನ್ ದಾಳಿಯಲ್ಲಿ ಉಪಸ್ಥಿತರಿದ್ದರು.