ಉಡುಪಿ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು: ‘ಕೋವಿದ-2023’- ರಾಷ್ಟ್ರೀಯ ಕಾರ್ಯಾಗಾರ

ಉಡುಪಿ: ಶ್ರೀಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಆಯುರ್ವೇದಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ, ಉಡುಪಿಯ ಸಂಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದ ವತಿಯಿಂದಆಯುರ್ವೇದ ಶಿಕ್ಷಕರಿಗೆ ಒಂದು ದಿನದ ರಾಷ್ಟ್ರ ಮಟ್ಟದ ಬೋಧನೆ-ಕಲಿಕಾ ವಿಧಾನಗಳ ಬಗ್ಗೆ ‘ಕೋವಿದ- 2023’ ಕಾರ್ಯಾಗಾರವನ್ನು ಇಂದು ಆಯೋಜಿಸಲಾಗಿತ್ತು.

ಡೀನ್‌ ಐಎಸ್‌ಎಮ್, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು, ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ. ಪ್ರಶಾಂತ್‌ಎ.ಎಸ್.ರವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ‘ಆಯುರ್ವೇದದಜಾಗತೀಕರಣದ ಮಹತ್ವವನ್ನು ವಿವರಿಸಿದರು.ಈ ಕಾರ್ಯಾಗಾರವು ಬದಲಾದ ನೇಷನಲ್‌ ಕಮೀಷನ್ ಫಾರ್‌ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (NCISM) ನ ಪಠ್ಯಕ್ರಮವನ್ನು ಅನುಸರಿಸುವಲ್ಲಿ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ ಹಾಗೂ ಈ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ತಂಡವನ್ನು ಪ್ರಶಂಶಿಸಿದರು.

ಉಡುಪಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಸತೀಶ್‌ಆಚಾರ್ಯರವರು ಕಾರ್ಯಾಗಾರಕ್ಕೆ ಆಗಮಿಸಿರುವ ಎಲ್ಲಾ ಶಿಕ್ಷಕರಿಗೆ ಶುಭಕೋರಿದರು. ಇದೇ ಸಂದರ್ಭದಲ್ಲಿ ಸ0ಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದಿಂದ‘ಕೋವಿದ’ ಪುಸಕ್ತವನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ರವರು ತಮ್ಮಅಧ್ಯಕ್ಷೀಯ ಭಾಷಣದಲ್ಲಿ ‘ಬೋಧನೆ ಮತ್ತುಕಲಿಕೆಯು ಭಾರತದಲ್ಲಿ ಗುರುಕುಲ ಪದ್ಧತಿಯಿಂದ ಆರoಭಗೊ0ಡು ಈಗಿನ ಆಯುರ್ವೇದ ವಿದ್ಯಾರ್ಥಿಗಳನ್ನು ಜಾಗತಿಕ ನಾಯಕರಾಗಿ ನಿರ್ಮಿಸಲು ನೂತನ ತಂತ್ರಜ್ಞಾನಗಳ ಬಳಕೆಯನ್ನು ಶಿಕ್ಷಣದಲ್ಲಿ ಅಳವಡಿಸುವುದು ಉತ್ತಮ ಹಾಗೂ ಶಿಕ್ಷಕರಿಗೆ ಪ್ರಸ್ತುತ ಪಠ್ಯಕ್ರಮವನ್ನು ಅನುಸರಿಸಲು ಈ ಕಾರ್ಯಾಗಾರ ಪ್ರಯೋಜನಕಾರಿಯಾಗಿದೆ’ ಎಂದು ನುಡಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜಎಸ್., ಕಾಲೇಜಿನ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಡಾ. ನಿರಂಜನ್‌ರಾವ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೀರಕುಮಾರ ಕೆ. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ವಿದ್ಯಾಲಕ್ಷಿ÷್ಮ ಕೆ. ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪುಣೆ, ಮಹಾರಾಷ್ಟçದತಿಲಕ್‌ಆಯುರ್ವೇದ ಮಹಾವಿದ್ಯಾಲಯದಸಂಹಿತ ಮತ್ತು ಸಿದ್ಧಾಂತ ವಿಭಾಗದ ಪ್ರಾಧ್ಯಾಪಕರಾದ ಡಾ. ಮೋಹನ್‌ ಆರ್. ಜೋಶಿ ಮತ್ತು ಮಹಾರಾಷ್ಟçದ ವೈ.ಎಮ್.ಪಿ.ಎ.ಎಮ್.ಸಿಯ ರೋಗನಿದಾನ ವಿಭಾಗದಮುಖ್ಯಸ್ಥರು ಹಾಗೂ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಜೈಕಿರಣ್‌ ಕಿಣಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೇಷನಲ್‌ ಕಮೀಷನ್ ಫಾರ್‌ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (NCISM- National Commission for Indian System of Medicine) ನ ಬೋರ್ಡ್ಆಫ್ ಸ್ಟಡೀಸ್‌ ಇದರ ಅಧ್ಯಕ್ಷರಾದ ಡಾ. ಬಿ.ಎಸ್. ಪ್ರಸಾದ್‌ರವರು ದಿಕ್ಸೂಚಿ ಭಾಷಣವನ್ನು ಆನ್‌ಲೈನ್ ಮೂಲಕ ನೆರವೇರಿಸಿದರು.

ಸಂಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದಸಹಪ್ರಾಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಪಿ. ಸ್ವಾಗತಿಸಿ, ಸಹಪ್ರಾಧ್ಯಾಪಕರಾದಡಾ. ಅರ್ಹಂತ್‌ ಕುಮಾರ್‌ ಎ.ರವರು ವ0ದಿಸಿದರು. ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅರುಣ್‌ ಕುಮಾರ್ ಹಾಗೂ ಕೌಮಾರಭೃತ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಹನಾ ಶಂಕರಿರವರುಕಾರ್ಯಕ್ರಮ ನಿರೂಪಿಸಿದರು. ತದನಂತರ ಸಂಪನ್ಮೂಲ ವ್ಯಕ್ತಿಗಳಿಂದ ವೈಜ್ಞಾನಿಕ ಉಪನ್ಯಾಸವನ್ನು ನೆರವೇರಿಸಲಾಯಿತು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರ0ಭವು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್‌ಎಸ್.ರವರ ಅಧ್ಯಕ್ಷೀಯತೆಯಲ್ಲಿ ನೆರವೇರಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೀರಕುಮಾರ ಕೆ. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ವಿದ್ಯಾಲಕ್ಷಿ÷್ಮ ಕೆ. ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುಣೆ ಮಹಾರಾಷ್ಟçದ ತಿಲಕ್‌ ಆಯುರ್ವೇದ ಮಹಾವಿದ್ಯಾಲಯದ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಪ್ರಾಧ್ಯಾಪಕರಾದ ಡಾ. ಮೋಹನ್‌ಆರ್. ಜೋಶಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾದಡಾ. ಲಿಖಿತಾಡಿ.ಎನ್.ರವರು ಕಾರ್ಯಕ್ರಮದ ವರದಿಯನ್ನು ವಾಚಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರು ತಮ್ಮ ಅನಿಸಿಕೆಯನ್ನು ಹಂಚಿಕೊ0ಡರು. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ವಿದ್ಯಾಲಕ್ಷಿ÷್ಮಕೆ.ಯವರು ವಂದಿಸಿ, ಅಗದತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಡಾ. ಶುಭ ಪಿ.ಯು.ರವರುಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!