ಪರ್ಕಳ: ಪುರಾತನ ವಿಷ್ಣು ದೇವಾಲಯಕ್ಕೆ ಬೇಕಿದೆ ಕಾಯಕಲ್ಪ

ಪರ್ಕಳ ಮಾಣೆಬೆಟ್ಟು ಎಂಬಲ್ಲಿ ಹೊಯ್ಸಳರ ಕಾಲದ ವಿಷ್ಣು ದೇವಾಲಯೊಂದು ಪ್ರಚಲಿತಕ್ಕೆ ಬಾರದೆ ಹಾಗೆ ಉಳಿದುಕೊಂಡಿದ್ದು, ಇದನ್ನು ಜೀರ್ಣೋದ್ಧಾರ ಮಾಡುವ ಅವಶ್ಯಕತೆ ಇದೆ.

12ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಈ ದೇವಾಲಯದಲ್ಲಿ ಮುರಕಲ್ಲಿನಿಂದ ಲಾಕ್ ಸಿಸ್ಟಮ್ ನಲ್ಲಿ ಕೂಡಿರುವ ಗೋಲಾಕಾರದ ಗೋಪುರ ಕಾಣಸಿಗುತ್ತದೆ. ಒಬ್ಬ ಮನುಷ್ಯ ಒಳಗೆ ಸುತ್ತು ಬರುವಷ್ಟು ಜಾಗವಿದೆ. ವೃತ್ತಾಕಾರದ ಬಾವಿ ಕೂಡ ಇದೆ. ಹಳೆಕಾಲದ ಗಜಗಾತ್ರದ ಕಪ್ಪು ಮುರಕಲ್ಲಿನಿಂದ ಕೂಡಿದ ದೇವಾಲಯದ ಸುತ್ತಲೂ ಆವರಣ ಗೋಡೆ ಇದೆ.

ಪೂಜೆ ನಡೆಯದೇ ಸುಮಾರು 45 ವರ್ಷಗಳೇ ಕಳೆದಿರಬಹುದು ಎನ್ನುತ್ತಾರೆ ಸ್ಥಳೀಯರು.
ಸದ್ಯ ಸ್ಥಳೀಯರು ನಿತ್ಯ ದೀಪ ಹಚ್ಚುತ್ತಾರೆ. ಆದರೆ ಯಾವುದೇ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿಲ್ಲ. ಈ ಪುರಾತನ ದೇಗುಲವನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಅಧ್ಯಯನ ನಡೆಸುವ ಅಗತ್ಯವೂ ಇದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು.

Leave a Reply

Your email address will not be published. Required fields are marked *

error: Content is protected !!