ಉಡುಪಿ: ಶ್ರೀಕೃಷ್ಣ ಜನ್ಮಾಷ್ಠಮಿ, ಭಕ್ತರಿಗೆ ರಥಬೀದಿ ಪ್ರವೇಶ ನಿರ್ಬಂಧ

ಉಡುಪಿ: (ಉಡುಪಿ ಟೈಮ್ಸ್ ವರದಿ) ಕೊರೋನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತು ವಿಟ್ಲಪಿಂಡಿ ಉತ್ಸವ ಸಂಪ್ರಾದಯದಂತೆ ಸರಳವಾಗಿ ಆಚರಿಸಲು ಶ್ರೀಕೃಷ್ಣ ಮಠವು ನಿರ್ಧರಿಸಿದ್ದು, ಜಿಲ್ಲಾಡಳಿತ ನಿರ್ದೆಶನದಂತೆ ಗುರುವಾರ ಮತ್ತು ಶುಕ್ರವಾರದಂದು ಭಕ್ತರಿಗೆ ರಥಬೀದಿ ಪ್ರವೇಶ ನಿರ್ಬಂದಿಸಿದೆ.

ಗುರುವಾರ ಪರ್ಯಾಯ ಸ್ವಾಮೀಜಿಯವರಿಂದ ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ, ರಾತ್ರಿ 9 ಗಂಟೆಗೆ ವಿಶೇಷ ಪೂಜೆ, ಮಧ್ಯರಾತ್ರಿ 12.16 ಕ್ಕೆ ಅರ್ಘ್ಯ ಪ್ರದಾನ ಮಾಡಲಿರುವರು. ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮದಲ್ಲಿ ಗೊಲ್ಲರು ಮಠದ ಸುತ್ತ ಗುಜ್ಜಿಗಳಿಗೆ ಅಳವಡಿಸಿದ ಮಡಿಕೆಗಳನ್ನು ಒಡೆಯುವ ಸಂಪ್ರಾದಯವಿದೆ.

ನಂತರ ಅಲಂಕೃತಗೊಂಡ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃತ್ತಿಕಾ ಮೂರ್ತಿ ಕುಳ್ಳಿರಿಸಿ ರಥಬೀದಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಲಾಗುವುದು. ಬಳಿಕ ಪರ್ಯಾಯ ಶ್ರೀಗಳು ಮಧ್ವ ಸರೋವರದಲ್ಲಿ ಶ್ರೀಕೃಷ್ಣನ ಮೃತ್ತಿಕಾ ಮೂರ್ತಿ ವಿಸರ್ಜನೆ ಮಾಡುತ್ತಾರೆ.
ಪ್ರಥಮ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿರುವ ಅದಮಾರು ಶ್ರೀ ಈಶಪ್ರಿಯ ತೀರ್ಥರು, ಹಿರಿಯ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕೊರೊನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆಯನ್ನು ರದ್ದುಗೊಳಿಸಲಾಗಿದೆಂದು ಮಠದ ಪ್ರಕಟಣೆ ತಿಳಿಸಿದೆ. ಅಷ್ಠಮಿ ಎಂದರೆ ಹುಲಿವೇಷ, ವ
ವಿಟ್ಲಪಿಂಡಿಯಂದು ಎಲ್ಲರ ಮನ ರಂಜಿಸುತ್ತಿದ್ದ ಹುಲಿವೇಷ ಸಹಿತ ಎಲ್ಲ ವೇಷ ಹಾಕುವುದಕ್ಕೆ ಜಿಲ್ಲಾಡಳಿತ ನಿರ್ಬಂದಿಸಿದೆ. ಈ ಬಾರಿಯ ಜನ್ಮಾಷ್ಟಮಿಯ ಸಂಭ್ರಮವನ್ನು ಭಕ್ತರು ಆನ್ ಲೈನ್‌ನಲ್ಲಿ ಮೂಲಕ ನೋಡುವ ವ್ಯವಸ್ಥೆಯನ್ನು ಶ್ರೀಕೃಷ್ಣ ಮಠ ಮಾಡಿದೆ.

Leave a Reply

Your email address will not be published. Required fields are marked *

error: Content is protected !!