ಹಿಂಡೆನ್ ಬರ್ಗ್ ಆರೋಪ ಎದುರಿಸಲು ಅದಾನಿಯಿಂದ ಅಮೆರಿಕ ಮೂಲದ ಕಾನೂನು ಸಂಸ್ಥೆಯ ನೇಮಕ
ನವದೆಹಲಿ ಫೆ.10 : ಹಿಂಡೆನ್ ಬರ್ಗ್ ವರದಿ ಬಳಿಕ ಆದಾನಿ ಸಮೂಹ ಸಂಸ್ಥೆಯ ಷೇರುಗಳು ತೀವ್ರ ಕುಸಿದು ಅಪಾರ ನಷ್ಟ ಅನುಭವಿಸುವಂತಾಗಿದೆ. ಇದೀಗ ತಮ್ಮ ಸಂಸ್ಥೆಯ ವಿರುದ್ಧ ಆರೋಪಗಳನ್ನು ಎದುರಿಸಲು ಗೌತಮ್ ಅದಾನಿ ಅವರು ಅಮೆರಿಕ ಮೂಲದ ಕಾನೂನು ಸಂಸ್ಥೆಯನ್ನು ನೇಮಿಸಿಕೊಂಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.
ವರದಿಯ ಪ್ರಕಾರ, ಅದಾನಿ ಗ್ರೂಪ್ ವಾಚ್‍ಟೆಲ್, ಲಿಪ್ಟನ್, ರೋಸೆನ್ ಮತ್ತು ಕಾಟ್ಜ್‍ನ ಹಿರಿಯ ವಕೀಲರನ್ನು ಸಂಪರ್ಕಿಸಿದ್ದು, ಸಂಘಟಿತ ಸಂಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕೆಂದು ಸಲಹೆ ಕೇಳಿದೆ ಎನ್ನಲಾಗುತ್ತಿದೆ. ನ್ಯೂಯಾರ್ಕ್ ಮೂಲದ ಕಾನೂನು ಸಂಸ್ಥೆ ವಾಚ್ಟೆಲ್ ಕಾಪೆರ್Çರೇಟ್ ಕಾನೂನಿನಲ್ಲಿ ಪರಿಣತಿಯನ್ನು ಹೊಂದಿದ್ದು, ನಿಯಮಿತವಾಗಿ ದೊಡ್ಡ ಮತ್ತು ಸಂಕೀರ್ಣ ವಹಿವಾಟುಗಳನ್ನು ನಿರ್ವಹಿಸುತ್ತಿದೆ. ಕಳೆದ ವಾರ, ಅದಾನಿ ಗ್ರೂಪ್‍ನ ಷೇರುಗಳ ಬೆಲೆಗಳು ಗಣನೀಯವಾಗಿ ಕುಸಿದಿತ್ತು. ಪ್ರಮುಖವಾಗಿ ಹಿಂಡೆನ್ ಬರ್ಗ್, ವರದಿಯ ಬಳಿಕ, ಅದಾನಿ ಸಮೂಹದಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆಯನ್ನು ಆರೋಪಿಸಲಾಗಿತ್ತು. ಈ ವರದಿ ಅದಾನಿ ಸಮೂಹದ ಷೇರುಗಳಲ್ಲಿನ ಮುಂದುವರಿದ ಮಾರಾಟಗಳು ಅದರ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‍ಪ್ರೈಸಸ್ ಲಿಮಿಟೆಡ್, ಸಂಪೂರ್ಣವಾಗಿ ಚಂದಾದಾರರಾಗಿರುವ 20,000 ಕೋಟಿ ರೂ. ಫಾಲೋ-ಆನ್ ಸಾರ್ವಜನಿಕ ಕೊಡುಗೆಯನ್ನು ರದ್ದುಗೊಳಿಸುವಂತೆ ಮಾಡಿತ್ತು.
ಇತ್ತ ಹಿಂಡೆನ್ ಬರ್ದ್ ವರದಿಯ ವಿರುದ್ಧ ಕಿಡಿಕಾರಿರರುವ ಅದಾನಿ ಸಮೂಹ ಹಿಂಡೆನ್ ಬರ್ಗ್ ಅನ್ನು “ಅನೈತಿಕ ಕಿರು ಮಾರಾಟಗಾರ” ಎಂದು ಟೀಕಿಸಿದೆ. ಅಂತೆಯೇ ನ್ಯೂಯಾರ್ಕ್ ಮೂಲದ ಘಟಕದ ವರದಿಯು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ. ಜನವರಿ 29 ರಂದು ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅದಾನಿ ಗ್ರೂಪ್, 413 ಪುಟಗಳ ಸುದೀರ್ಘ ವರದಿಯಲ್ಲಿ, ಹಿಂಡೆನ್‍ಬರ್ಗ್ ರಿಸರ್ಚ್‍ನ ಇತ್ತೀಚಿನ ವರದಿಯು ಯಾವುದೇ ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ ಆದರೆ ಭಾರತ, ಅದರ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ “ಲೆಕ್ಕಾಚಾರದ ದಾಳಿ” ಎಂದು ಹೇಳಿದೆ.