ಚಾಕಲೇಟ್ ಡ್ರಿಂಕ್ಸ್​ಗಳಲ್ಲೂ ಡ್ರಗ್ಸ್: ಕ್ರಮಕ್ಕೆ ಡಿಜಿಪಿ ಪ್ರವೀಣ ಸೂದ್ ಸೂಚನೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ಡ್ರಗ್ಸ್ ಸಮುದ್ರಮಾರ್ಗ, ಆಕಾಶಮಾರ್ಗ, ಭೂ ಮಾರ್ಗ ಎಲ್ಲಿಂದ ಬಂದರೂ ಮಟ್ಟ ಹಾಕುತ್ತೇವೆ ಎಂದು ಡಿಜಿಪಿ ಪ್ರವೀಣ ಸೂದ್ ಎಚ್ಚರಿಕೆ ‌ನೀಡಿದ್ದಾರೆ. ಸದ್ಯ ಆಗಿರುವ ಕಾರ್ಯಾಚರಣೆ ನಮಗೆ ಸಮಾಧಾನ ತಂದಿಲ್ಲ, ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡ್ತೇವೆ. ಚಾಕಲೇಟ್ ಡ್ರಿಂಕ್ಸ್​ಗಳಲ್ಲೂ ಡ್ರಗ್ಸ್ ಮಿಕ್ಸ್ ಮಾಡಿ ಕೊಡ್ತಾರೆಂಬ ಮಾಹಿತಿ ಇದೆ. ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ-,ಎಸ್ಪಿಗೆ ಸೂಚನೆ ನೀಡಿದ್ದೇನೆ ಎಂದು ಉಡುಪಿ ಎಸ್​​ಪಿ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.

ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ.‌ ಬೆಂಗಳೂರಲ್ಲಿ ಕಳೆದ ಹತ್ತು ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಜತೆಗೆ ಬೆಳಗಾಂ, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಭಾಗದಲ್ಲೂ ಕಾರ್ಯಚರಣೆ ನಡೆಸಿದ್ದೇವೆ ಎಂದರು.

ಕಾಲೇಜುಗಳು ಬಂದ್ ಇವೆ. ಕಾಲೇಜ್ ಬಂದ್ ಇದ್ದರೂ ಡ್ರಗ್ಸ್ ದಂಧೆ  ನಡೆಯಲ್ಲ ಎಂದು ಹೇಳಲು ಸಾಧ್ಯವಿಲ್ಲ‌.‌ ಮುಖ್ಯಮಂತ್ರಿ ನಿನ್ನೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ . ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ಬೇರೆ ಕಡೆಯೂ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಸುದ್ದಿಯಾಗಲ್ಲ ಎಂದು ಹೇಳಿದರು.

ಸೆಲೆಬ್ರಿಟಿಗಳ ಬಂಧನ ಇತ್ಯಾದಿ ವಿಚಾರ ಬೆಂಗಳೂರು ಕಮಿಷನರ್ ಮಾತಾಡ್ತಾರೆ.‌ ತನಿಖೆ ನಡೆಯುತ್ತಿರುವಾಗ ಪೊಲೀಸ್ ಅಧಿಕಾರಿಯಾಗಿ ಮಾತನಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿದೆ. ಮಾತ್ರವಲ್ಲ ಕಠಿಣ ಸೂಚನೆಯನ್ನು ನೀಡಿದ್ದಾರೆ. ರಾಜ್ಯವನ್ನು ಡ್ರಕ್ಸ್ ಮುಕ್ತ ಮಾಡುವ ಸೂಚನೆ ನೀಡಿದ್ದಾರೆ.‌ ಇದೀಗ ಬೆಂಗಳೂರು-ಮಂಗಳೂರು ದೊಡ್ಡ ಡ್ರಗ್ಸ್ ಹಬ್ ಆಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!