ಮಲ್ಪೆ ಸಭಾ ಉಸ್ಮಾನ್ ಹಾಜಿ ನಿಧನ

ಉಡುಪಿ(ಉಡುಪಿ ಟೈಮ್ಸ್ ವರದಿ): ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರೂ, ಮಲ್ಪೆ ಮದೀನಾ ಮಸೀದಿಯಲ್ಲಿ ಕಳೆದ 35 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಉಧ್ಯಮಿಯೂ ಆದ ಸಬಾ ಉಸ್ಮಾನ್ ಹಾಜಿ ಮಲ್ಪೆ (80) ರವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಸೆ 7 ರಂದು ಸ್ವಗೃಹದಲ್ಲಿ ನಿಧನರಾದರು.

ಅವರ ಅಂತ್ಯಸಂಸ್ಕಾರದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಉಪಾಧ್ಯಕ್ಷರಾದ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು, ಮುಸ್ಲಿಂ ಜಮಾಅತ್ ಉಡುಪಿ ತಾಲೂಕು ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ರಫೀಕ್ ದೊಡ್ಡಣಗುಡ್ಡೆ ಹಾಗು ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.
ಸಂತಾಪ
ಡಿಕೆಎಸ್ ಸಿ ಮ್ಯಾನೇಜರ್ ಯ.ಕೆ.ಮುಸ್ತಫ ಸಅದಿ,ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಹಾಜಿ ಮೊಯ್ದಿನ್ ಗುಡ್ವಿಲ್, ಕಾರ್ಯದರ್ಶಿ ಅಡ್ವಕೆಟ್ ಹಂಝತ್ ಹೆಜಮಾಡಿ, ಎಸ್ ಡಿ ಐ ಅಧ್ಯಕ್ಷರಾದ ಸಯ್ಯದ್ ಫರೀದ್ ಉಡುಪಿ, ಕುಂಞುಮೋನು ಆದಿವುಡುಪಿ(ಎಲ್ ಐಸಿ) ,ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ, ಎಸ್ಸೆಸ್ಸೆಫ್ ನಾಯಕರಾದ ಅಶ್ರಫ್ ಅಂಜದಿ ಪಕ್ಷಿಕೆರೆ, ಕೆ ಎಸ್ ಎಮ್ ಮನ್ಸೂರ್ ಉಡುಪಿ ಹಾಗೂ ಮತ್ತಿತರ ನಾಯಕರು ಸಂತಾಪ ಸೂಚಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!