ಕೋಟ: ಅಳಿಯನಿಗೆ ಹಲ್ಲೆಗೈದು ಮಾವ- ಬಳಿಕ ಹೆದರಿ ನೇಣಿಗೆ ಶರಣು

ಕೋಟ ಫೆ.3(ಉಡುಪಿ ಟೈಮ್ಸ್ ವರದಿ): ಅಳಿಯನ ಮೇಲೆ ಹಲ್ಲೆ ಮಾಡಿದಕ್ಕೆ ಪೊಲೀಸ್ ಕೇಸ್ ಆಗುತ್ತದೆ ಎಂದು ಹೆದರಿ ಮಾವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುರುವ (63) ಆತ್ಮಹತ್ಯೆ ಮಾಡಿಕೊಂಡವರು

ಫೆ.2 ರಂದು ಸಂಜೆ ಮಾವ ಗುರುವ ಅವರು ಅಳಿಯ ರಘುರಾಮ ಎಂಬವರ ಮೇಲೆ ಹಲ್ಲೆ ಮಾಡಿ ತಲೆಗೆ ಹೊಡೆದು ಗಾಯ ಮಾಡಿದ್ದರಿಂದ ರಘುರಾಮರವರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಇದರಿಂದ ತನ್ನ ಮೇಲೆ ಪೊಲೀಸ್ ಕೇಸ್ ಆಗುತ್ತದೆ ಎನ್ನುವ ಭಯದಿಂದಲೋ ಅಥವಾ ಯಾವುದೋ ಕಾರಣದಿಂದಲೋ ನಿನ್ನೆ ರಾತ್ರಿ ಯಿಂದ ಇಂದು ಬೆಳಿಗ್ಗಿನ ಅವಧಿಯಲ್ಲಿ ತಮ್ಮ ಕೋಣೆಯಲ್ಲಿದ್ದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಪತ್ನಿ ಪ್ರೇಮಾ ಎಂಬವರು ನೀಡಿದ ಮಾಹಿತಿಯಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!