ಅದಾನಿ ಷೇರು ಕುಸಿತ: ಎಲ್‌ಐಸಿ, ಎಸ್‌ಬಿಐಗೆ ರೂ.78 ಸಾವಿರ ಕೋಟಿ ನಷ್ಟ- ಸುರ್ಜೇವಾಲಾ
ನವದೆಹಲಿ: ‘ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕೇವಲ ಎರಡು ದಿನಗಳಲ್ಲಿ ಭಾರಿ ಕುಸಿತ ಉಂಟಾಗಿರುವುದರಿಂದ ಎಲ್ಐಸಿ ಹಾಗೂ ಎಸ್‌ಬಿಐ ಗೆ ರೂ.78 ಸಾವಿರ ಕೋಟಿಗೂ ಅಧಿಕ ಮೊತ್ತ ನಷ್ಟವಾಗಿದೆ. ಇಷ್ಟಾದರೂ ಹಣಕಾಸು ಸಚಿವರು ಹಾಗೂ ತನಿಖಾ ಸಂಸ್ಥೆಗಳು ಮೌನಕ್ಕೆ ಶರಣಾಗಿರುವುದು ಏಕೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಅದಾನಿ ಸಮೂಹವು ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ಹಾಗೂ ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್ ರಿಸರ್ಚ್’ ಆರೋಪಿಸಿದೆ. ಹೀಗಿದ್ದರೂ ಎಲ್‌ಐಸಿ ಹಾಗೂ ಎಸ್‌ಬಿಐ, ಅದಾನಿ ಸಮೂಹದಲ್ಲಿ ಹೂಡಿಕೆ ಮುಂದುವರಿಸಿವೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
‘ಎಲ್‌ಐಸಿಯಲ್ಲಿರುವುದು ಸಾರ್ವಜನಿಕರ ಹಣ. ‘ಹಿಂಡನ್‌ಬರ್ಗ್ ರಿಸರ್ಚ್’ ವರದಿ ಬಳಿಕ ಎಲ್‌ಐಸಿ ಯ ಹೂಡಿಕೆ ಮೌಲ್ಯ ರೂ.77 ಸಾವಿರ ಕೋಟಿಯಿಂದ ರೂ.53 ಸಾವಿರ ಕೋಟಿಗೆ ಕುಸಿದಿದೆ. ಸಂಸ್ಥೆಗೆ ರೂ. 23,500 ಕೋಟಿ ನಷ್ಟ ಉಂಟಾಗಿದೆ. ಎಲ್‌ಐಸಿ ಷೇರು ಮೌಲ್ಯವು ರೂ.22,442 ಕೋಟಿಯಷ್ಟು ನಷ್ಟವಾಗಿದೆ. ಹೀಗಿದ್ದರೂ ಎಲ್‌ಐಸಿ, ಅದಾನಿ ಸಮೂಹದಲ್ಲಿ ರೂ.300 ಕೋಟಿ ಹೂಡಿಕೆ ಮಾಡುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
We dont want this gujari statement Mr Sarjewala.