ನಾನು ಯಾರಲ್ಲೂ ಬೇಡಿ ದಾನ ಧರ್ಮ ಮಾಡಿಲ್ಲ: ಶಾಸಕ ಭಟ್‌ಗೆ ಪ್ರಮೋದ್ ತಿರುಗೇಟು

ಉಡುಪಿ: ಶಾಸಕರೇ ಕಳೆದ 60 ದಿನ ಲಾಕ್ ಡೌನ್ ಸಂದರ್ಭ ಸಾಕಷ್ಟು ಮರಳು ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿದೆ, ಅಂತಹ ಅಪರಾಧಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವಿಟ್ ಮೂಲಕ ಒತ್ತಾಯಿಸುವ ಮೂಲಕ ಮಾಜಿ ಮತ್ತು ಹಾಲಿ ಶಾಸಕರ ಟ್ವಿಟ್ ವಾರ್ ಪ್ರಾರಂಭವಾಗಿದೆ.

ನಾನು ನನ್ನ ಸಾಮಾಜಿಕ ಜೀವನದಲ್ಲಿ ನನ್ನದೇ ರೀತಿಯಲ್ಲಿ ಹಲವಾರು ವರ್ಷಗಳಿಂದ ಜನರಿಗೆ ಸಹಾಯ ಮಾಡುತ್ತ ಇದ್ದೇನೆ, ನಾನು ಯಾರಲ್ಲೂ ಬೇಡಿ ದಾನ ಧರ್ಮ ಮಾಡಿಲ್ಲ, ನನ್ನ ಸ್ವಂತ ಹಣದಲ್ಲಿ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿದ್ದೇನೆ. ಲಾಕ್ ಡೌನ್ ಸಂದರ್ಭದಲ್ಲೂ ನನ್ನದೆ ರೀತಿಯಲ್ಲಿ ನಾನೂ ಸಹಾಯ ಮಾಡಿದ್ದೇನೆ, ಎಲ್ಲೂ ಫೋಟೊ ತೆಗೆಸಿ ಪ್ರಚಾರ ಮಾಡಿಕೊಂಡು ಬಂದಿಲ್ಲ ಎಂದು ಟ್ವಿಟ್ ಮೂಲಕ ಶಾಸಕ ರಘುಪತಿ ಭಟ್‌ಗೆ ತೀರುಗೇಟು ನೀಡಿದ್ದಾರೆ.
ಮಾಜಿ ಸಚಿವ ಪ್ರಮೋದ್ ಕಳೆದ 60 ದಿನಗಳಿಂದ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಹೇಳಿಕೆ ಪ್ರಮೋದ್ ಈ ರೀತಿ ಟ್ವಿಟ್ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!