ಉದ್ಯಾವರ: ಗ್ರಾಮ ಪಂಚಾಯತ್ ಸದಸ್ಯೆ ವಿನಯಾ ರಾಜುಗೆ ನುಡಿ ನಮನ
ಉದ್ಯಾವರ: ಮಿತಭಾಷಿಯಾಗಿದ್ದುಕೊಂಡು ಪ್ರೀತಿಯಿಂದ ಜನಸೇವೆ ಮತ್ತು ಸಂಘಟನೆಯಲ್ಲಿ ತೊಡಗಿಕೊಂಡ ನಮ್ಮೆಲ್ಲರ ಪ್ರೀತಿಯ ನಾಯಕಿ ವಿನಯ ರಾಜು ಅಗಲಿಕೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ತುಂಬಲಾರದ ನಷ್ಟ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಹಮ್ಮಿಕೊಂಡ ಇತ್ತೀಚಿಗೆ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ವಿನಯ ರಾಜುರವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ ಎಸ್. ಭಂಡಾರಿಯವರು ಮೃತರ ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪಾರ್ಚನೆಯನ್ನು ಮಾಡಿ ನುಡಿದರು.
ವಿನಯಾ ಅವರು ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಉದ್ಯಾವರ ಮಹಿಳಾ ಮಂಡಲ ಅದ್ಯಕ್ಷರಾಗಿ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸದಸ್ಯರಾಗಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಕೊಂಡವರು. ಅವರ ಅಗಲಿಕೆ ನಮ್ಮೆಲ್ಲರಿಗೂ ಖೇದ ತಂದಿದೆ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ನುಡಿದರು. ಸ್ಟೀವನ್ ಕುಲಾಸೋ ಮೃತರಿಗೆ ನುಡಿ ನಮನ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್, ಸರಳಾ ಎಸ್. ಕೋಟ್ಯಾನ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಸದಸ್ಯರಾದ ಮೇರಿ ಡಿಸೋಜಾ, ಪುಂಡರೀಶ್ ಕುಂದರ್, ಸರೋಜಾ, ಜುಡಿತ್ ಪಿರೇರಾ, ಪಕ್ಷದ ಮುಖಂಡರಾದ ಅಜಿತ್ ಮೆಂಡನ್, ಸೋಮಶೇಖರ್ ಸುರತ್ಕಲ್, ಯು. ಸೀತಾರಾಮ್, ಸುಂದರ್ ಸುವರ್ಣ, ಹಮೀದ್ ಸಾಬ್ಜಾನ್, ಗಿರೀಶ್ ಗುಡ್ಡೆಯಂಗಡಿ, ಸರಸ್ವತಿ ಮೆಂಡನ್, ಸುಹೇಲ್ ರೆಹಮತ್, ವಿಶ್ವನಾಥ ಪೂಜಾರಿ, ಸತೀಶ್ ಡಿ. ಸಾಲ್ಯಾನ್, ಮೊಹಮ್ಮದ್ ಇರ್ಫಾನ್, ಪ್ರೇಮ್ ಮಿನೇಜಸ್ ಉಪಸ್ಥಿತರಿದ್ದರು. ಆಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.