ಉಡುಪಿ: ಬಹು ನಿರೀಕ್ಷಿತ “ಶ್ರೀಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ” ಯಕ್ಷಗಾನಕ್ಕೆ ಕ್ಷಣಗಣನೆ

ಉಡುಪಿ: ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಇವರ ನೇತೃತ್ವದಲ್ಲಿ ಕಿನ್ನಿಮುಲ್ಕಿ ಒಡ್ಡಾಡಿ ಮೈದಾನದಲ್ಲಿ ಜನವರಿ 14 ರ ಶನಿವಾರ ನಡೆಯಲಿರುವ ಯಕ್ಷಗಾನ ಕ್ಷಣಗಣನೆ ಆರಂಭವಾಗಿದೆ.

ಸುಮಾರು 2 ಎಕರೆ ಜಾಗವನ್ನು ಸಮತಟ್ಟುಗೊಳಿಸಿ ವಾಹನ ಪಾರ್ಕಿಂಗ್ ಗೆ ಪ್ರತ್ಯೇಕವಾದ ವಿಶಾಲ ಪ್ರದೇಶವನ್ನು ಸಜ್ಜುಗೊಳಿಸಿ, ಬರುವಂತಹ ಯಕ್ಷಗಾನ ಪ್ರೇಮಿಗಳಿಗೆ ಸರ್ವ ರೀತಿಯ ಸಿದ್ಧತೆ ಮಾಡಲಾಗಿದೆ .

ಜಾನಪದ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬನ್ನಂಜೆ ಬಾಬು ಅಮೀನ್ ರಿಗೆ ಸನ್ಮಾನ, ಅಖಿಲ ಭಾರತ ಬಿಲ್ಲವ ಮಹಾಜನ ಸಂಘದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ ಪದ್ಮರಾಜ್, ಮಾಜಿ ಸಚಿವರ ವಿನಯ ಕುಮಾರ್ ಸೊರಕೆ, ಪ್ರವೀಣ್ ಪೂಜಾರಿ, ದಿವಾಕರ್ ಕುಂದರ್, ದಿನೇಶ್ ಹೆಗ್ಡೆ, ಸರಸ್ವತಿ, ನವೀನ್ ಶೆಟ್ಟಿ, ಮಾಧವ ಬನ್ನಂಜೆ, ಮಹಾಬಲ ಅಮೀನ್, ಹರೀಶ್ ಸುವರ್ಣ, ಹರೀಶ್ ಜತ್ತನ್ನ, ಸತೀಶ್ ಕೋಟ್ಯಾನ್, ಚಲನಚಿತ್ರ ನಟರಾದ ಅರ್ಜುನ್ ಕಾಪಿಕಾಡ್, ಚಿರಶ್ರೀ ಅಂಚನ್ ಮತ್ತು ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ನೆರವೇರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನೀಲಾದರ ಶೇರಿಗಾರ್ ರವರ ನಾದಸ್ವರ ವಾದನ, ಬ್ರಹ್ಮಶ್ರೀ ಚಂಡೆ ಬಳಗ, ಕುತ್ಪಾಡಿ ಇವರ ಚಂಡೆ ವಾದನ, ಶ್ರೀ ನಾರಾಯಣ ಗುರು ಯುವಜನ ಕಲಾ ಮಂಡಳಿ, ಉದ್ಯಾವರ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಕರ ಸಂಕ್ರಾಂತಿ ಯ ಶುಭ ದಿನದಂದು ನಡೆಯುವ ಈ ಕಾರ್ಯಕ್ರಮಕ್ಕೆ ಹಲವಾರು ಸಂಘ ಸಂಸ್ಥೆಗಳು ಹಾಗೂ ಯಕ್ಷಗಾನ ಪ್ರೇಮಿಗಳು ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಫ್ಲೆಕ್ಸ್ ಗಳನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ  ಶುಭ ಹಾರಸಿದ್ದು ಯಕ್ಷಗಾನ ಕಾರ್ಯಕ್ರಮಕ್ಕೆ ಈ ಮಟ್ಟದಲ್ಲಿ ಪ್ರಚಾರ ದೊರೆತದ್ದು ಒಂದು ದಾಖಲೆ.

ಸಾರ್ವಜನಿಕರ, ಯಕ್ಷಗಾನ ಪ್ರೇಮಿಗಳ, ಬನ್ನಂಜೆ ಬಾಬು ಅಮೀನ್ ಅಭಿಮಾನಿಗಳ ಸರ್ವ ಸಹಕಾರವನ್ನು ಬಯಸುತ್ತಾ ಕಾರ್ಯಕ್ರಮಕ್ಕೆ ಶ್ರೀನಾರಾಯಣಗುರು ಯುವ ವೇದಿಕೆ ಇದರ ಗೌರವ ಅಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್ ಸಂತೆಕಟ್ಟೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಪೂಜಾರಿ ಬೈಂದೂರು, ಖಜಾಂಚಿ ವಿಕೇಶ್ ಸುವರ್ಣ ಹೆಜಮಾಡಿ ಸ್ವಾಗತ ಬಯಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!