ಅಕ್ರಮ ಹಣ ವರ್ಗಾವಣೆ, ವಂಚನೆ, ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅರೆಸ್ಟ್

ಬೆಂಗಳೂರು: ಬರೋಬ್ಬರಿ 11 ದಿನಗಳ ಬಳಿಕ ಗುಜರಾತ್​​ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ, ವಂಚನೆ, ಲೈಂಗಿಕ ದೌರ್ಜನ್ಯ, ಕೌಂಟುಬಿಕ ದೌರ್ಜನ್ಯ, ಲೇವಾದೇವಿ ಪ್ರಕರಣ ಹೀಗೆ ಹತ್ತಾರು ಕೇಸ್​ಗಳಲ್ಲಿ ಪ್ರಮುಖ ಆರೋಪಿಯಾಗಿರೋ ಸ್ಯಾಂಟ್ರೋ ರವಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾ‌ನೆ.

ಸ್ಯಾಂಟ್ರೋ ರವಿ ತನ್ನ ಕರ್ಮಕಾಂಡ ಹೊರ ಬರುತ್ತಿದ್ದಂತೆಯೇ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಹೀಗಾಗಿ ಈತನ ಬಂಧನಕ್ಕಾಗಿ ಹಿರಿಯ ಪೊಲೀಸ್​ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಿ ಎಡಿಜಿಪಿ ಅಲೋಕ್‌ ಕುಮಾರ್ ಆದೇಶಿಸಿದ್ದರು. ಕೊನೆಗೂ ಪೊಲೀಸ್​​ ವಿಶೇಷ ತನಿಖಾ ತಂಡ ಸ್ಯಾಂಟ್ರೋ ರವಿಯನ್ನು ಬಂಧಿಸಿದೆ.

ಇಂದು ಮಾಧ್ಯಮ​​​ ಜತೆ ಮಾತನಾಡಿದ್ದ ಎಡಿಜಿಪಿ ಅಲೋಕ್‌ ಕುಮಾರ್, ನಮ್ಮ ಅಧಿಕಾರಗಳ ತಂಡ ಎಲ್ಲ ರೀತಿಯ ಹುಡುಕಾಟ ನಡೆಸುತ್ತಿದೆ. ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ರವಿ ಎಲ್ಲಿ ಇದ್ದಾನೆ ಎಂದು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ. ಪೊಲೀಸ್​ ಇಲಾಖೆ ಜೊತೆ ಸಂಪರ್ಕ ಇದೆ. ಆರೋಪಿ ರವಿಗಾಗಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಈತ ಬೇರೆ ಬೇರೆ ಕೇಸ್​ನಲ್ಲಿ ಅಪರಾಧಿಯಾಗಿದ್ದಾನೆ ಎಂದಿದ್ದರು.

Leave a Reply

Your email address will not be published. Required fields are marked *

error: Content is protected !!